ಜಿಲ್ಲೆ

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

ನಾಗೇಶ ಎಸ್

ಬೆಟ್ಟದಪುರ: ಸೆಸ್ಕ್ ಉಪವಿಭಾಗದ ಕಣಗಾಲು ಶಾಖಾ ವ್ಯಾಪ್ತಿಯಲ್ಲಿ ಚಪ್ಪರದಹಳ್ಳಿ ಫೀಡರ್‌ನ ಲಿಂಕ್‌ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ಡಿ.4ರಂದು ಕಣಗಾಲು, ಹಲಗನಹಳ್ಳಿ, ದೊಡ್ಡಕಮರವಳ್ಳಿ, ಚಪ್ಪರದಹಳ್ಳಿ ಮತ್ತು ಹಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡಲಾಗುವುದು. ಹಾಗಾಗಿ ಗ್ರಾಹಕರು ಸಹಕರಿಸಬೇಕಾಗಿ ಬೆಟ್ಟದಪುರ ಸೆಸ್ಕ್ ಎಇಇ ಕೆ.ಕೆ.ಲಕ್ಷ್ಮೀಶ್ ಮನವಿ ಮಾಡಿದ್ದಾರೆ.