ಜಿಲ್ಲೆ

ವಿವಿಧೆಡೆ ವಿದ್ಯುತ್ ವ್ಯತ್ಯಯ

ನಾಗೇಶ ಎಸ್

ಸೋಮವಾರಪೇಟೆ: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರವನ್ನು 33/11 ಕೆವಿಯಿಂದ 66/11 ಕೆವಿ ವಿತರಣಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುತ್ತಿರುವ ಹಿನ್ನೆಲೆಯಲ್ಲಿ ಎಫ್3 ಐಗೂರು ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಮಾ.19, 21, 23, 26 ಹಾಗೂ 28ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಸೆಸ್ಕ್ ಎಇಇ ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಳಗುಂದ, ಯಡವಾರೆ, ಐಗೂರು, ಹೊಸತೋಟ, ಕಾಜೂರು ಹಾಗೂ ಕಾರೆಕೊಪ್ಪ ಸುತ್ತಲಿನ ಗ್ರಾಮಗಳು.