ಜಿಲ್ಲೆ

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ನಾಗೇಶ ಎಸ್

ಕೆ.ಆರ್.ಪೇಟೆ: ಮಂದಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆ.19ರಂದು 4ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹೊನ್ನೇನಹಳ್ಳಿ, ಮೂಡಲಕೊಪ್ಪಲು, ಆಲೇನಳ್ಳಿ ಮೂಡನಹಳ್ಳಿ, ಮಂದಗೆರೆ, ಚಿಕ್ಕ ಮಂದಗೆರೆ, ಗದ್ದೆ ಹೊಸೂರು, ಬೇವುನಹಳ್ಳಿ, ಶ್ರವಣಳ್ಳಿ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಇಇ ವಿ.ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.