ಮದ್ದೂರು: 66/11 ಕೆ.ವಿ. ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ತಾಲೂಕಿನ ಛತ್ರದಹೊಸಹಳ್ಳಿ, ಗುರುದೇವರಹಳ್ಳಿ, ಸಿ.ಎ.ಕೆರೆ, ಹುಣ್ಣನದೊಡ್ಡಿ, ಹುಲಿಗೆರೆಪುರ, ಬೋರಾಪುರ ಮತ್ತು ಗೊರವನಹಳ್ಳಿ ವ್ಯಾಪ್ತಿಗಳಲ್ಲಿ ಆ.19 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.