ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಬಳಿ ಗ್ಯಾರಂಟಿ ಯೋಜನೆಗಳ ಪ್ರಚಾರ ವಾಹನಕ್ಕೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್​ ಎ.ಎನ್​.ಹೆಗ್ಗಡೆ ಚಾಲನೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್​.ರಮೇಶ್​, ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಸಿಇಒ ಪ್ರಕಾಶ್​ ನಿಟ್ಟಾಲಿ ಮತ್ತಿತರರು ಇದ್ದರು. 
ಜಿಲ್ಲೆ

ಗ್ಯಾರಂಟಿ ಜಾರಿಯಿಂದಲೇ ಅಧಿಕಾರ

ಚಿಕ್ಕಬಳ್ಳಾಪುರ: ಕರ್ನಾಟಕದ ಮಾದರಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದವರೇ ದೇಶದ ವಿವಿಧ ರಾಜ್ಯಗಳಲ್ಲಿ ಇಂತಹ ಯೋಜನೆಗಳನ್ನು ಜಾರಿಗೆ ತಂದು ಅಧಿಕಾರ ನಡೆಸುತ್ತಿದ್ದಾರೆ. ಹಾಗೆಯೇ ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದಲ್ಲೂ ಸಹ ಘೋಷಿಸಬಹುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್​ ಎ.ಎನ್​. ಹೆಗ್ಗಡೆ ವ್ಯಂಗ್ಯವಾಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜನರ ಹಿತದೃಷ್ಟಿಯಿಂದ ರಾಜ್ಯ ಕಾಂಗ್ರೆಸ್​ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಸವಲತ್ತುಗಳು ನೇರವಾಗಿ ಲಾನುಭವಿಗಳ ಕೈಸೇರುತ್ತಿದೆ. ಇದಕ್ಕಾಗಿ 52 ಸಾವಿರ ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲಿಡಲಾಗಿತ್ತು. ಇದುವರೆಗೆ 36 ಸಾವಿರ ಕೋಟಿ ರೂ. ರ್ಖಚಾಗಿದೆ. ಇದು ದೊಡ್ಡ ಸಾಧನೆಯಾಗಿದೆ ಎಂದರು.

ಮಧ್ಯಪ್ರದೇಶ, ಜಾರ್ಖಂಡ್​, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಒಡಿಷಾ ಸೇರಿ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಕರ್ನಾಟಕದೊಳಗೆ ಬೆಳೆದು, ರಾಜ್ಯದ ಹೊರಗೂ ವಿಸ್ತರಿಸಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ಏನಾದರೂ ಸಣ್ಣಪುಟ್ಟ ಲೋಪ ಮತ್ತು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು. ಗೃಹಲಕ್ಷಿ$್ಮ ಹಣವು ನವೆಂಬರ್​ವರೆಗೆ ಬಿಡುಗಡೆಯಾಗಿದ್ದು ಬಾಕಿ ಹಣ ತ್ವರಿತವಾಗಿ ಫಲಾನುಭವಿಗಳಿಗೆ ತಲುಪಲಿದೆ. ಇದರಲ್ಲಿ ಯಾವುದೇ ಅನುಮಾನ, ಗೊಂದಲ ಬೇಡ. ಅಪಪ್ರಚಾರಗಳಿಗೆ ಯಾರೊಬ್ಬರೂ ಕಿವಿಗೊಡಬಾರದು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್​.ರಮೇಶ್​, ಉಪಾಧ್ಯಕ್ಷ ರಾಮಕೃಷ್ಣಪ್ಪ, ಜಿ.ಸುಬ್ಬಾರೆಡ್ಡಿ, ಆದಿರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್​. ರವೀಂದ್ರ, ಜಿಪಂ ಸಿಇಒ ಪ್ರಕಾಶ್​ ಜಿ.ಟಿ. ನಿಟ್ಟಾಲಿ, ಉಪಕಾರ್ಯದರ್ಶಿ ಅತೀಕ್​ ಪಾಷಾ, ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರಿದ ಅಧ್ಯಕ್ಷರಾದ ಮಧುಸೂದನ್​ ರೆಡ್ಡಿ, ಮುನಿನಾರಾಯಣ, ಎಚ್​.ಎಸ್​.ನರೇಂದ್ರ ಮತ್ತಿತರರು ಇದ್ದರು.

ಪ್ರಚಾರ ವಾಹನಕ್ಕೆ ಚಾಲನೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಸಂಚಾರಿ ವಾಹನಕ್ಕೆ ಸೂರಜ್​ ಎ.ಎನ್​.ಹೆಗ್ಗಡೆ ಚಾಲನೆ ನೀಡಿದರು. ವಾರ್ತಾ ಸಹಾಯಕ ಎಂ.ಆರ್​. ಮಂಜುನಾಥ, ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಕಲಾತಂಡದ ಕಲಾವಿದರಾದ ವೈ.ಟಿ. ಪ್ರಸನ್ನ ಕುಮಾರ್​, ಕಿರಣ್​, ನರಸಿಂಹಮೂರ್ತಿ, ಬಿ.ಸಿ.ಲೋಕೇಶ್​, ಡಿ.ಹೆಸ್​.ನಂದೀಶ್​ ಮತ್ತಿತರರು ಇದ್ದರು.

ಎಲ್ಲರೂ ಅರ್ಹರಿದ್ದಾರೆಯೇ?: ಕೇಂದ್ರ ಸರ್ಕಾರ ಸಹ ವಿವಿಧ ಸ್ಥಾನಗಳಿಗೆ ಹಲವರ ನಾಮನಿರ್ದೇಶನ ಮಾಡಿದೆ. ಇವರಲ್ಲಿ ಎಲ್ಲರೂ ಅರ್ಹರೇ? ಎಂದು ಸೂರಜ್​ ಎ.ಎನ್​.ಹೆಗ್ಗಡೆ ಪ್ರಶ್ನಿಸಿದರು. ನಾಮ ನಿರ್ದೇಶನದ ವಿವಿಧ ಹುದ್ದೆಗಳಿಗೆ (ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸೇರಿ) ಸರ್ಕಾರವು ಕ್ಯಾಬಿನೆಟ್​ ದರ್ಜೆ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲೇರಿದವರ ನಡೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರವು ಹಲವು ಹುದ್ದೆಗಳಿಗೆ ನಾಮ ನಿರ್ದೇಶನ ಮಾಡಿದೆ. ಇದರಂತೆ ಕರ್ನಾಟಕ ಸರ್ಕಾರವು ನಡೆದುಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ತೀರ್ಮಾನದ ಆದೇಶಗಳು ಸಾಮಾನ್ಯ ಎಂದರು. ಕೇಂದ್ರದ ನಡೆಯನ್ನು ಪ್ರಶ್ನಿಸದೇ ರ್ನಿದಿಷ್ಟ ವಿಷಯಗಳಲ್ಲಿ ಗೊಂದಲ ಮೂಡಿಸುವಂತಹ ಟೀಕಾಕಾರರ ಧೋರಣೆಗಳು ಜನರಿಗೆ ಅರ್ಥವಾಗುತ್ತದೆ ಎಂದರು.