ಲಿಂಗಸುಗೂರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ಗದ್ದೆಪ್ಪ, ಮಲ್ಲಣ್ಣ, ಹೂವಯ್ಯ, ಪೀರಪ್ಪ, ಯೋಗಪ್ಪ, ಈರಾರಡ್ಡಿ, ನಿಂಗಪ್ಪ, ಪಂಪಾಪತಿ, ನಾಗರಾಜ, ಬಸಪ್ಪ, ಶರಣಪ್ಪ, ಶ್ರೀನಿವಾಸರಾವ್, ಹನುಮಗೌಡ, ಶಿವರಾಮ್, ರಮೇಶ, ಆದಪ್ಪ, ಮಾಳಪ್ಪ, ದುರುಗಪ್ಪ, ಶರಣಪ್ಪ, ಚೆನ್ನಪ್ಪ, ನಿಂಗಪ್ಪ ಇತರರಿದ್ದರು. 
ಜಿಲ್ಲೆ

ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸಿ

ರುದ್ರಪ್ಪ ವಾಲಿ

ಲಿಂಗಸುಗೂರು: ಪಟ್ಟಣದ ಮೂಲಕ ಹಾಯ್ದು ಹೋಗಿರುವ ರಾಂಪೂರ ಏತನೀರಾವರಿ ಕಾಲುವೆಗೆ ಸಮರ್ಪಕ ನೀರು ಹರಿಸದಿದ್ದರಿಂದ ಬೆಳೆಗಳು ಒಣಗುವ ಹಂತ ತಲುಪಿವೆ. ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಎಸಿ ಬಸವಣೆಪ್ಪ ಕಲಶೆಟ್ಟಿಗೆ ರೈತರು ಒತ್ತಾಯಿಸಿದರು.

ಏತನೀರಾವರಿ ನಾಲೆಯ ಕೊನೆಯ ಭಾಗದ ಜಮೀನುಗಳಲ್ಲಿ ಮೆಣಸಿನಕಾಯಿ, ಹತ್ತಿ, ತೊಗರಿ ಸೇರಿ ಇತರೆ ಬೆಳೆಗಳು ಸಮರ್ಪಕ ನೀರು ದೊರೆಯದೆ ಬಾಡುವ ಹಂತ ತಲುಪಿವೆ. ನೀರಿನ ಅಭಾವದಿಂದ ರೈತರು ಪರಿತಪಿಸುವಂತಾಗಿದೆ.

ರಾಂಪೂರ ಏತನೀರಾವರಿ ಕಾಲುವೆಯಿಂದ ಬಯ್ಯಪುರ ಭಾಗದ ಕಡೆಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಕೊನೆಯ ಭಾಗದ ರೈತರನ್ನು ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ. ವಾರದಲ್ಲಿ ನಾಲ್ಕು ದಿನ ನೀರು ಹರಿಸಿದರೆ ಬಾಡುತ್ತಿರುವ ಬೆಳೆಗಳು ರಕ್ಷಣೆಯಾಗಿ ರೈತರು ಸಂಕಷ್ಟದಿಂದ ಪಾರಾಗಬಹುದು ಎಂದರು.