ಜಿಲ್ಲೆ

ರೋಟರಿ ಕ್ಲಬ್ ನಿಂದ ಪೌರಕಾರ್ಮಿಕರ ಸನ್ಮಾನ

ಹುಬ್ಬಳ್ಳಿ: ನಗರದ ಸರಸ್ವತಿ ವಿದ್ಯಾಲಯದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ವಿದ್ಯಾಲಯದ ಇಂಟರ್ಯಾಕ್ಟ ಕ್ಲಬ್ ವತಿಯಿಂದ ಪೌರ ಕಾರ್ಮಿಕರ ದಿನ ಆಚರಿಸಲಾಯಿತು.

ಕುಮಾರ ಪಾರ್ಕ್ ಬಡಾವಣೆಯ ಪೌರಕಾರ್ಮಿಕರಿಗೆ ಉಡುಗೊರೆ ಹಾಗೂ ಸಿಹಿ ನೀಡುವ ಮೂಲಕ ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ದಿನೇಶ ಶೆಟ್ಟಿ ಮಾತನಾಡಿ, ಪೌರ ಕಾರ್ಮಿಕರು ಎಲ್ಲ ಸಮಯದಲ್ಲೂ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಶ್ರಮಿಸುತ್ತಾರೆ. ಸುತ್ತಮುತ್ತಲಿನ ಕಸ ತೆಗೆದು ನಗರವನ್ನು ಶುಚಿಯಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ವಿದ್ಯಾಲಯ ಅಧ್ಯಕ್ಷ ಲಿಂಗರಾಜ ಪಾಟೀಲ, ಉಪಾಧ್ಯಕ್ಷ ವಿವೇಕ ನಾಯಕ, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವಿಣ ಭನ್ಸಾಲಿ, ಶಿವಪ್ರಸಾದ ಲಕಮನಹಳ್ಳಿ, ಬಾಲಕಷ್ಣ ಸರಾ, ಸಂಜೋತ ಶಾ, ಡಾ. ಪ್ರಕಾಶ ವಾರಿ, ಭುಜಬಲ್ ಮಾಲಗತ್ತಿ, ಪ್ರದಿಪ ಶೆಟ್ಟಿ, ರಮೇಶ ಬೋರಾ, ಪ್ರಾಚಾರ್ಯ ಕೀರ್ತಿ ದೇಶಪಾಂಡೆ, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.