ಗಂಗಾವತಿ: ನಗರದಲ್ಲಿರುವ ಸರ್ಕಾರಿ ಸ್ನಾತಕೋತ್ತರ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಸ್ನಾತಕೋತ್ತರ ಕೇಂದ್ರದ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಆಡಳಿತ ನಿರ್ದೇಶಕಿ ಡಾ.ಮುಮ್ತಾಜ್ ಬೇಗಂಗೆ ಮನವಿ ಸಲ್ಲಿಸಿದರು.
ಸಮಿತಿ ತಾಲೂಕಾಧ್ಯಕ್ಷ ಯು.ನಾಗರಾಜ್ ಮಾತನಾಡಿ, ಕೊಪ್ಪಳ ವಿವಿ ವ್ಯಾಪ್ತಿಯಲ್ಲಿ ಬರುವ ಗಂಗಾವತಿ ಸ್ನಾತಕೋತ್ತರ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಕಂದಾಯ ಇಲಾಖೆಗೆ ಸೇರಿ ಹಳೇಯ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿದ್ದು, ಶುದ್ಧ ಕುಡಿವ ನೀರು ಮತ್ತು ಶೌಚಗೃಹ ನಿರ್ವಹಣೆ ವ್ಯವಸ್ಥೆಯಿಲ್ಲ.
ಗ್ರಂಥಾಲಯ ಕೊರತೆಯಿಂದ ಅಗತ್ಯ ಪಠ್ಯಪುಸ್ತಕ ಮತ್ತು ಇತರ ಗ್ರಂಥಗಳು ದೊರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಉನ್ನತ ಶಿಕ್ಷಣದ ಕನಸು ಮರೀಚಿಕೆಯಾಗುತ್ತಿದೆ. ಕೂಡಲೇ ಸ್ಪಂದಿಸಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷ ಎಂ.ಶರ್ೀ, ಸದಸ್ಯರಾದ ಬಸಯ್ಯ, ದೊಡ್ಡಬಸವ, ವಿದ್ಯಾರ್ಥಿಗಳಾದ ಹನುಮೇಶ, ಮದನ್ ಇತರರಿದ್ದರು.