ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಹಿಂದಿ ದಿನಾಚರಣೆ ನಿಮಿತ್ತ ಗುರುವಾರ ಸೃಜನಾತ್ಮಕ ಹಿಂದಿ ಭಿತ್ತಪತ್ರಗಳನ್ನು ಅನಾವರಣ ಮಾಡಲಾಯಿತು. ಪ್ರಾಚಾರ್ಯ ಡಾ.ವೆಂಕಟೇಶ ದೇವರು, ಉಪ ಪ್ರಾಚಾರ್ಯ ಡಾ.ಆಂಜಿನೇಯ, ಉಪನ್ಯಾಸಕರಾದ ಡಾ.ಅರುಣಾ ಹಿರೇಮಠ, ಪುರುಷೋತ್ತಮ ಆಚಾರ್, ಸತ್ಯನಾರಾಯಣ ಜೋಷಿ, ಡಾ.ಗಾಯತ್ರಿ, ತನುಜಾ ಇದ್ದರು. 
ಜಿಲ್ಲೆ

ಭಿತ್ತಿಪತ್ರಗಳು ಸೃಜನಶೀಲತೆಯಿಂದ ಕೂಡಿರಬೇಕು

ರಾಚಯ್ಯ ಸ್ವಾಮಿ

ರಾಯಚೂರು: ಭಿತ್ತಿಪತ್ರಗಳು ಪಠ್ಯ ಮತ್ತು ಚಿತ್ರಾತ್ಮಕ ಅಂಶಗಳನ್ನು ಒಳಗೊಂಡಿದ್ದರೂ ಸೃಜನಶೀಲತೆ ಹೊಂದಿರದಿದ್ದರೆ ಗಮನ ಸೆಳೆಯುವುದಿಲ್ಲ ಎಂದು ಎಲ್‌ವಿಡಿ ಕಾಲೇಜಿನ ಪ್ರಾಚಾರ್ಯ ಡಾ.ವೆಂಕಟೇಶ ದೇವರು ಹೇಳಿದರು.
ಸ್ಥಳೀಯ ಎಲ್‌ವಿಡಿ ಕಾಲೇಜಿನಲ್ಲಿ ಹಿಂದಿ ದಿನಾಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಹಿಂದಿ ಭಿತ್ತಪತ್ರಗಳ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಿತ್ತಿಪತ್ರಗಳು ಆಕರ್ಷಕ ಮತ್ತು ಮಾಹಿತಿಯನ್ನು ಒಳಗೊಂಡಿರುವ ವಿನ್ಯಾಸವನ್ನು ಹೊಂದಿರಬೇಕು ಎಂದರು.
ಉಪ ಪ್ರಾಚಾರ್ಯ ಡಾ.ಆಂಜಿನೇಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಅರುಣಾ ಹಿರೇಮಠ ಮಾತನಾಡಿ, ಕಾಲೇಜಿನಲ್ಲಿ ಪ್ರತಿವರ್ಷ ವಿವಿಧ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪುರುಷೋತ್ತಮ ಆಚಾರ್, ಸತ್ಯನಾರಾಯಣ ಜೋಷಿ, ಡಾ.ಗಾಯತ್ರಿ, ತನುಜಾ, ಡಾ.ತಾಯಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.