ವಿವಿಧ ಬೇಡಿಕೆ ಈಡೇರಿಕೆ ಕಟ್ಟಡ ಕಾರ್ಮಿಕರು ಆ.5ರಂದು ಹಮ್ಮಿಕೊಂಡಿರುವ ಮುಖ್ಯಮಂತ್ರಿ ಮನೆ ಚಲೋ ಅಭಿಯಾನ ಪೋಸ್ಟರ್​ನ್ನು ಮಂಗಳವಾರ ಕೊಪ್ಪಳದಲ್ಲಿ ಬಿಡುಗಡೆಗೊಳಿಸಲಾಯಿತು. ವಿವಿಧ ಕಾರ್ಮಿಕ ಸಂಟನೆಗಳ ಮುಖಂಡರಾದ ಖಾಸಿಂ ಸರ್ದಾರ, ಮೆಹಬೂಬ್​ ದೆದಾರ, ಶಿವಾನಂದ ಬಾರಕೇರ, ಮಂಜಪ್ಪ, ತುಕಾರಾಮ್​ ಪಾತ್ರೋಟಿ, ಎಸ್​.ಎ.ಗಾರ, ಕೆ.ಎಸ್​.ಜನಾರ್ದನ, ಶರಣು ಗಡ್ಡಿ, ಮಂಗಳೇಶ ರಾಠೋಡ್​ ಇದ್ದರು. 
ಜಿಲ್ಲೆ

ಸಿಎಂ ಮನೆ ಚಲೋ ಅಭಿಯಾನ 5ಕ್ಕೆ

Kopala - Raveendra V K

ಕೊಪ್ಪಳ: ಕಟ್ಟಡ ಕಾರ್ಮಿಕರು ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ಉಳಿಸುವ ಅಭಿಯಾನ ಅಂಗವಾಗಿ ಕಾರ್ಮಿಕ ಮುಖಂಡರು ಮಂಗಳವಾರ ನಗರದ ಸಾಹಿತ್ಯ ಭವನ ಬಳಿ ಪೋಸ್ಟರ್​ ಬಿಡುಗಡೆಗೊಳಿಸಿದರು.

ಹೈಕೋರ್ಟ್​ ಆದೇಶದಂತೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಾವತಿಸಬೇಕು. ವಿವಿಧ ಖರೀದಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ತನಿಖೆಯಾಗಬೇಕು. ಮಂಡಳಿ ನಿಧಿ ಉಳಿಸಿ ಬಡ ಕಾರ್ಮಿಕರ ಬದುಕು ರಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಆ.5ರಂದು ಸಿಎಂ ಮನೆ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಮಿಕರು ಬೆಂಗಳೂರಿನಲ್ಲಿ ಸೇರಲಿದ್ದಾರೆ. ಜಿಲ್ಲೆಯಿಂದಲೂ ಕಾರ್ಮಿಕರು ಆಗಮಿಸುವಂತೆ ಕೋರಿದರು.

ವಿವಿಧ ಕಾರ್ಮಿಕ ಸಂಟನೆಗಳ ಮುಖಂಡರಾದ ಖಾಸಿಂ ಸರ್ದಾರ, ಮೆಹಬೂಬ್​ ದೆದಾರ, ಶಿವಾನಂದ ಬಾರಕೇರ, ಮಂಜಪ್ಪ, ತುಕಾರಾಮ್​ ಪಾತ್ರೋಟಿ, ಎಸ್​.ಎ.ಗಾರ, ಕೆ.ಎಸ್​.ಜನಾರ್ದನ, ಶರಣು ಗಡ್ಡಿ, ಮಂಗಳೇಶ ರಾಠೋಡ್​ ಇತರರಿದ್ದರು.