ಜಿಲ್ಲೆ

ಗ್ರಾಮಒನ್‌ಗಳಲ್ಲಿ ಅಂಚೆ ಸೇವೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಎಲ್ಲ ಅಂಚೆ ಕಚೇರಿಗಳ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡಲು ಗ್ರಾಮಒನ್ ಕೇಂದ್ರದಲ್ಲಿ ಭಾರತೀಯ ಅಂಚೆ ಇಲಾಖೆ ಸೌಲಭ್ಯ ಕಲ್ಪಿಸಿದ್ದು ಸಾರ್ವಜನಿಕರು ಹತ್ತಿರದ ಗ್ರಾಮಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಂಚೆ ಸೇವೆಗಳ ಸೌಲಭ್ಯ ಪಡೆಯಬಹುದಾಗಿದೆ ಎಂದು ದೊಡ್ಡಬಳ್ಳಾಪುರ ಅಂಚೆ ಕಚೇರಿಯ ಐಪಿಪಿಬಿ ವ್ಯವಸ್ಥಾಪಕ ಶ್ರವಣಕುಮಾರ ಹೇಳಿದರು.

ದೊಡ್ಡಬಳ್ಳಾಪುರ ಟೌನ್‌ನಲ್ಲಿರುವ ದೊಡ್ಡಬಳ್ಳಾಪುರ ಶಾಖೆಯ ಅಂಚೆ ಕಚೇರಿ ಮುಂಭಾಗ ಗ್ರಾಮ ಒನ್ ಕೇಂದ್ರಗಳಲ್ಲಿ ಪೋಸ್ಟ್ ಆಫೀಸ್ ಸೇವೆಗಳು ಪ್ರಾರಂಭದ ಪೋಸ್ಟರ್ ಬಿಡುಗಡೆಗೊಳಿ ಮಾತನಾಡಿದರು. ಗ್ರಾಮ ಒನ್ ಕೇಂದ್ರಗಳಲ್ಲಿ ಈಗಾಗಲೇ ಸಾರ್ವಜನಿಕರಿ ಅನುಕೂಲವಾಗುವಂತೆ ಅನೇಕ ಕಾರ್ಯಕ್ರಮಗಳ ಸೌಲಭ್ಯ ಲಭಿಸುತ್ತಿದೆ ಇದರ ಜತೆಗೆ ಅಂಚೆ ಇಲಾಖೆಯಲ್ಲಿನ ಸೇವೆಗಳನ್ನು ಕಲ್ಪಿಸಿರುವುದು ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಿದೆ ಎಂದರು. ಅಂಚೆ ಕಚೇರಿಗಳಲ್ಲಿನ ಒತ್ತಡ ಕಡಿಮೆಗೊಳಿಸುವುದು ಹಾಗೂ ಸಾರ್ವಜನಿಕರು ಗಂಟೆಗಂಟಲೆ ಸೇವೆಗೆ ಕಾಯುವುದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರು.

ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಗ್ರಾಮಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಸಾರ್ವಜನಿಕರಿಂದಲೂ ಕೇಂದ್ರದ ಸೇವೆಗೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಸೇವೆಯೂ ಲಭಿಸಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಯೋಜನಾ ವ್ಯವಸ್ಥಾಪಕ(ಡಿಪಿಎಂ) ಪ್ರೇಮಕುಮಾರ ಹೇಳಿದರು.