ಜಿಲ್ಲೆ

‘ಪ್ರೇಮ ಸಂತ’ ಕಿರುಚಿತ್ರ ಪೋಸ್ಟರ್ ಬಿಡುಗಡೆ

ನರಗುಂದ: ಪಟ್ಟಣದ ಸೋಮಾಪೂರ ನಾಗಲಿಂಗ ನಿಲಯದಲ್ಲಿ ಬುಧವಾರ ‘ಪ್ರೇಮ ಸಂತ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಭಾರತೀಯ ಸಂಗೀತ ಮಹಾವಿದ್ಯಾಲಯದ ಶ್ರೀನಿವಾಸ ಇನಾಮದಾರ, ಮಹೇಶ ಬಡಿಗೇರ, ವಿನಯ ದಂಡಗಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.

ಚಿತ್ರದ ನಾಯಕನಟ ಸಂತೋಷ ಹಟ್ಟಿ, ನಾಯಕಿ ರೇಣು ಗೋಪಿ, ಆನಂದ ಮಂಟೂರ, ಇಮಾಮ್ ಕೆರೂರ, ಮೌನೇಶ ಪತ್ತಾರ, ವಿಠಲ ಸೋಮನಕೊಪ್ಪ, ನಿರ್ದೇಶಕ ರಾಜು ಆಚಾರ್ಯ ಭಾಗಿಯಾಗಿದ್ದರು.

ಈ ಚಿತ್ರವು ತಂದೆ ಮತ್ತು ಮಗ, ಸ್ನೇಹಿತರ ಭಾವನಾತ್ಮಕ ಸಂದೇಶ ಹೊಂದಿರುವ ಸುಂದರ ಕಥಾ ಹಂದರವಾಗಿದೆ. ಯೂಟ್ಯೂಬ್ ಚಾನಲ್​ನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನ್ನುಳಿದ ಪಾತ್ರ ವರ್ಗಗಳಲ್ಲಿ ಸಂತೋಷ ಕೆರಿ, ಕವನಾ ದಂಡಗಿ, ಕಾವೇರಿ ಹೊಸಮನಿ, ಗುರು ಕನ್ಯಾಳ, ಗಿರೀಶ ಹಟ್ಟಿ, ಡಾ.ಶ್ರೀಕಾಂತ ಅಡ್ಡಣಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ನರಗುಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಪ್ರಮೋದ, ಸಂಕಲನ ಪ್ರವೀಣ ಚಿದಾನಂದ, ಸಾಹಿತ್ಯ ಮತ್ತು ಸಂಗೀತ ವಿನೋದ ಹಿರೇಮಠ, ಸಹ ನಿರ್ದೇಶನ ವಿನಯ ದಂಡಗಿ, ನಿರ್ಮಾಣ ಮತ್ತು ನಿರ್ವಹಣೆ ಮೌನೇಶ ಪತ್ತಾರ, ರಚನೆ ರಾಜು ಆಚಾರ್ಯ ಅವರದ್ದಾಗಿದೆ.