ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಅಕ್ಟೋಬರ ತಿಂಗಳ ಆರಂಭದಲ್ಲಿ ಶಾಖಾ ಅಂಚೆ ಕಚೇರಿಗಳಿಗೆ ಹೊಸ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿದ್ದು, ಇದರ ಪೂರ್ವ ತಯಾರಿಯಾಗಿ ಸೆ.29 ಹಾಗೂ 30ರಂದು ಅಂಚೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಈ ದಿನಗಳಲ್ಲಿ ಹಣ ಪಾವತಿ, ಹಿಂಪಡೆಯುವಿಕೆ (Deposits and withdrawals) ಹಾಗೂ ನೋಂದಣಿ ಅಂಚೆ ಮತ್ತು ಸ್ಪೀಡ್ ಪೋಸ್ಟ್ ಬುಕ್ಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.