ಜಿಲ್ಲೆ

ಆರ್ಥಿಕ ಉಳಿತಾಯ ಜಾಗೃತಿ ಮೂಡಿಸಿದ ಅಂಚೆ ಇಲಾಖೆ

ಬಸವರಾಜ ವೀರಪ್ಪ ಗರಗ

ಕುಂದಗೋಳ: ಗ್ರಾಮೀಣ ಪ್ರದೇಶದಲ್ಲಿ ಅಂಚೆ ಇಲಾಖೆಯು ಅತ್ಯುತ್ತಮ ಸೇವೆ ಸಲ್ಲಿಸುತ್ತ ಬಂದಿದ್ದು, ಒಂದು ಊರಿಂದ ಮತ್ತೊಂದು ಊರಿಗೆ ಅಂಚೆ ಮೂಲಕ ಸಂದೇಶ ರವಾನಿಸಿದ ಕೀರ್ತಿಯು ಅಂಚೆ ಇಲಾಖೆಯದ್ದಾಗಿದೆ ಎಂದು ಪ್ರಾಚಾರ್ಯ ಪಿ.ಕೆ. ಕಮ್ಮಾರ ಹೇಳಿದರು.

ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಥಿಕವಾಗಿ ಉಳಿತಾಯ ಮಾಡುವುದನ್ನು ಈ ಅಂಚೆಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ಪಶ್ಚಿಮ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಬಿ.ಎಂ. ಶರಣಪ್ಪ ಮಾತನಾಡಿ, ಇಲಾಖೆಯು ಈಗ ತುಂಬಾ ಬದಲಾವಣೆಗೊಂಡಿದ್ದು, ಅನೇಕ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗುಡಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಣಿ ಶಿರೂರು ಕಾರ್ಯಕ್ರಮ ಉದ್ಘ್ಘಾಟಿಸಿದರು. ಪಿಡಿಒ ಎಂ. ಚಕ್ಕೋಲಿ, ಪ್ರಥಮ ದರ್ಜೆಯ ಕಾಲೇಜ್ ಪ್ರಾಚಾರ್ಯ ಶ್ರೀಕಾಂತ ರಾಠೋಡ, ಪಿಎಸ್​ಐ ನವೀನ ಜಕಲಿ, ಹೆಸ್ಕಾಂ ಇಲಾಖಾಧಿಕಾರಿ ಲಕ್ಷ್ಮೀ ಬಜೆಂತ್ರಿ, ಮಾರುತಿ ಕುನ್ನೂರ, ಪ್ರಶಾಂತ ಬಣಗಲ್ ಇತರರಿದ್ದರು.

ಬಸವಕುಮಾರ ನೇಕಾರ ಹಾಗೂ ನಿಂಗಪ್ಪ ಶ್ಯಾಗೋಟಿ ಕಾರ್ಯಕ್ರಮ ನಿರ್ವಹಿಸಿದರು.