ತೆಲಸಂಗ: ಎಣ್ಣೆ ಕಾಳು ಬೆಳೆ ದೇಶದ ಆಹಾರ ಭದ್ರತೆಗೆ ಪ್ರಮುಖ ಕೊಡುಗೆ ನೀಡುತ್ತಿದ್ದು, ಬಿತ್ತನೆ ನಂತರ ವೈಜ್ಞಾನಿಕ ನಿರ್ವಹಣೆಯೂ ಅಗತ್ಯ ಎಂದು ತುಕಾನಟ್ಟಿಯ ಕಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದತ್ತು ಮೇತ್ರಿ ಹೇಳಿದರು.
ಸಮೀಪದ ಕನ್ನಾಳ ಗ್ರಾಮದಲ್ಲಿ ಕಷಿ ಹಾಗೂ ರೈತ ಕಲ್ಯಾಣ ಅಭಿವದ್ಧಿ ಇಲಾಖೆ, ಕಷಿ ಇಲಾಖೆ, ರಾಷ್ಟ್ರೀಯ ಬೀಜ ನಿಗಮ ನಿಯಮಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎಣ್ಣೆಕಾಳು ಬೆಳೆಗಳಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ರೈತರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ವಿಜ್ಞಾನಿ ಡಾ.ಮಾರುತಿ ಮಲವಾಡಿ ಮಾತನಾಡಿದರು. ರೈತರಾದ ಮುರಿಗೆಪ್ಪ ಹೊನವಾಡ, ಕಳಸಪ್ಪ ಹೊನಗೌಡ, ನಾನಾಗೌಡ ಪಾಟೀಲ, ಯಂಕಪ್ಪ ಅಸ್ಕಿ, ಶೇಖರ ವಳಸಂಗ, ಗುರು ಕಾಮನ್, ಧರೆಪ್ಪ ದಳವಾಯಿ, ಧರೆಪ್ಪ ಮಾಳಿ, ಪ್ರಕಾಶ ಇಸರಗೊಂಡ ಇತರರಿದ್ದರು.