ರಾಮದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ಎಸ್.ಪಿ. ಖಾತೇದಾರ, ಸುಶೀಲಕುಮಾರ, ವಿಜಯ ವಾದೋನಿ ಇತರರಿದ್ದರು. 
ಜಿಲ್ಲೆ

ಅಂಚೆ ಇಲಾಖೆ ಸೇವೆ ಶ್ಲಾಘನೀಯ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ಅಂಚೆ ಇಲಾಖೆ ಆಧುನಿಕ ವ್ಯವಸ್ಥೆಗೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ತಂತ್ರಜ್ಞಾನದ ಸಹಾಯದಿಂದ ಉತ್ತಮ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಒಂದೇ ಸೂರಿನಡಿ ಸೇವಾ ಸೌಲಭ್ಯ ಒದಗಿಸಲು ಬುಧವಾರ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ವಿವಿಧ ಯೋಜನೆಗಳನ್ನು ಪ್ರಾಮಾಣಿಕವಾಗಿ ಬಡಜನತೆಗೆ ತಲುಪಿಸಬೇಕು ಎಂದರು.
ಬೆಂಬಳಗಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎಂ. ಸಕ್ರಿ ಮಾತನಾಡಿ, 150 ವರ್ಷಗಳಿಂದ ಜನ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಂಚೆ ಇಲಾಖೆ ಸೇವೆ ಮರೆಯಲಾಗದ್ದು ಎಂದರು.

ಗ್ರೇಡ್-2 ತಹಸೀಲ್ದಾರ್ ಎಸ್.ಪಿ. ಖಾತೇದಾರ, ಅಂಚೆ ಇಲಾಖೆಯ ಉತ್ತರ ವಿಭಾಗ ಧಾರವಾಡ ಜನರಲ್ ಮ್ಯಾನೇಜರ್ ಕರ್ನಲ್ ಸುಶೀಲಕುಮಾರ, ಬೆಳಗಾವಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ವಿಜಯ ವಾದೋನಿ, ರಾಮದುರ್ಗ ಅಂಚೆ ಉಪವಿಭಾಗದ ಅಂಚೆ ನಿರೀಕ್ಷಕ ಮಂಜುನಾಥ ಆರ್. ಸಿಂಗದ ಮಾತನಾಡಿದರು.

ಜನಸಂಪರ್ಕ ಅಭಿಯಾನದಲ್ಲಿ ಆಧಾರ ನೋಂದಣಿ, ಆಧಾರ್ ತಿದ್ದುಪಡಿ, ಉಳಿತಾಯ ಖಾತೆ ತೆರೆಯುವುದು, ಎನ್‌ಪಿಸಿಐ ಜೋಡಣೆ, ಆಧಾರ್ ಲಿಂಕ್, ಆಧಾರ ಸೀಡಿಂಗ್, ಎಇಪಿಎಸ್ ವಿತ್‌ಡ್ರಾ, ಐಪಿಪಿಬಿ ಅಕೌಂಟ್ ತೆರೆಯುವುದು, ಪಿಎಲ್‌ಐ/ಆರ್‌ಪಿಎಲ್‌ಐ, ಸಿಇಎಲ್‌ಸಿ ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಜೋಡಣೆ, ಡಿ-ಕ್ಯೂಬ್ ವಿವಿಧ ಸಾಮಾಜಿಕ ಪಿಂಚಣಿ ವೇತನ ನೀಡುವುದು ಸೇರಿ ವಿವಿಧ ಸೌಲಭ್ಯ ಒದಗಿಸಲಾಯಿತು. ಪ್ರಧಾನ ಅಂಚೆ ಕಚೇರಿ ಅಂಚೆಪಾಲಕ ಪಿ.ಬಿ. ಪಾಟೀಲ, ದಾವಲ ಅಣ್ಣಿಗೇರಿ, ರಾಜು ಇತರರಿದ್ದರು.