ಜಿಲ್ಲೆ

ಅಂಚೆ ಜನ ಸಂಪರ್ಕ ಅಭಿಯಾನ 12ಕ್ಕೆ

POST COMMUNITY DEVELOPMENT KOPPAL OCTOBER 12

Kopala - Raveendra V K

ಕೊಪ್ಪಳ:ಅಂಚೆ ಇಲಾಖೆ ಸೇವೆಗಳನ್ನು ಜನರಿಗೆ ತಲುಪಿಸಲು ಅ.12ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಹೇಳಿದರು.

ಜನರ ಬಳಿಗೆ ಇಲಾಖೆ ಯೋಜನೆ ಕೊಂಡೊಯ್ಯಲು ಯೋಜಿಸಲಾಗಿದೆ. ಅದರ ಭಾಗವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಧಾರ್ ಜೋಡಣೆ, ಉಳಿತಾಯ, ವಿಮೆ ಸೇರಿ ಇಲಾಖೆ ಇತರ ಸೇವೆಗಳನ್ನು ಸ್ಥಳದಲ್ಲೇ ಜನರಿಗೆ ನೀಡಲಾಗುವುದು. ಅ.12ರಂದು ಸಾಹಿತ್ಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದ, ಶಾಸಕರು ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಬೆಳಗ್ಗೆ 9ರಿಂದಲೇ ಸೇವೆ ಆರಂಭವಾಗಲಿದೆ. ಸಂಜೆ 5 ಗಂಟೆವರೆಗೆ ಮುಂದುವರೆಸಲಾಗುವುದು. ಬಳಿಕ ನೋಂದಣಿಯಾದವರ ವಿವರ ಪಡೆದು ಅಭಿಯಾನ ಬಳಿಕವೂ ಸೇವೆ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂಚೆ ಸೇವೆಗಳ ಜತೆಗೆ ಬ್ಯಾಂಕ್ ಹಾಗೂ ವಿಮೆ ಸೌಲಭ್ಯಗಳನ್ನು ಇಲಾಖೆ ನೀಡುತ್ತಿದೆ. ಗ್ರಾಮೀಣ ಭಾಗದ ಜನತೆಗೂ ಅನುಕೂವಾಗುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 400 ಜನರಿಗೆ ಸೇವೆ ನೀಡಲು ಸಿದ್ಧರಾಗಿದ್ದೇವೆ. ಹೆಚ್ಚಿನ ಜನ ಬಂದಲ್ಲಿ ಅದಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗುವುದು.

ಜನರು ತಮ್ಮ ಆಧಾರ್, ಪಾನ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅಳತೆ ಭಾವಚಿತ್ರದೊಂದಿಗೆ ಆಗಮಿಸಿದಲ್ಲಿ ಸೇವೆ ಪಡೆಯಲು ಅನುಕೂಲವಾಗಲಿದೆ. ಹೆಚ್ಚಿನ ಸಂಖ್ಯೆಯ ಜನರು ಅಭಿಯಾನ ಸೌಲಭ್ಯ ಪಡೆಯಲಿ ಎಂದು ಮನವಿ ಮಾಡಿದರು. ಅಂಚೆ ಅಧಿಕಾರಿಗಳಾದ ಭೀಮಸೇನ ಎ.ಜೆ, ಜಿ.ಎನ್.ಹಳ್ಳಿ, ಜಗದೀಶ ಚಲವಾದಿ, ವೈ.ವೈ.ಕೋಳೂರು, ಅಡಿವೆಪ್ಪ ಇತರರಿದ್ದರು.