ಜಿಲ್ಲೆ

ನಾಳೆಯಿಂದ ಪೊಸೋಟ್ ತಂಳ್ ಉರೂಸ್

Mangaluru - Shravan Kumar Nala

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಧಾರ್ಮಿಕ ವಿದ್ವಾಂಸರೂ ಆಗಿದ್ದ ಖಾಝಿ ಅಸ್ಸಯ್ಯಿದ್ ಉಮರುಲ್ ಾರೂಕ್ ಆಲ್ ಬುಖಾರಿ ಪೊಸೋಟ್ ತಂಳ್ ಅವರ ಹತ್ತನೇ ಉರೂಸ್ ಹಾಗೂ ಅವರು ಸ್ಥಾಪಿಸಿದ ಮಂಜೇಶ್ವರ ಹೊಸಂಗಡಿಯ ಮಳ್‌ಹರ್ ವಿದ್ಯಾಸಂಸ್ಥೆಯ ರಜತ ಮಹೋತ್ಸವವು ಜೂ. 19ರಿಂದ 22ರವರೆಗೆ  ನಡೆಯಲಿದೆ ಎಂದು ಮಳ್ ಹರ್ ಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್ ಸಾಗರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜೂ. 19ರ ಸಂಜೆ 4.30ಕ್ಕೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧ್ಯಕ್ಷ ಸಯ್ಯಿದ್ ಆಟಕೋಯ ತಂಳ್ ಕುಂಬೋಲ್ ಉದ್ಘಾಟಿಸಲಿದ್ದು, ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎಂ.ಕೆ.ಎಂ. ಆಶ್ರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಅಂದು ರಾತ್ರಿ 8ಕ್ಕೆ ಸಂಸ್ಥೆಯ ಮುಖ್ಯಸ್ಥ ಸಯ್ಯಿದ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್ ನಲ್ಲಿ ಸಯ್ಯಿದ್ ಜಲಾಲುದ್ದೀನ್ ಸಅದಿ, ಸ್ಟಾಲಿಹ್ ಸಅದಿ ತಳಿಪ್ಪರಂಬ, ಹಂಝ ಕೋಯ ಬಾಖವಿ ಭಾಗವಹಿಸುವರು. ಜೂ.20ರಂದು ಮಧ್ಯಾಹ್ನದಿಂದ ಆರಂಭಗೊಳ್ಳುವ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಯ್ಯಿದ್ ಬಾಯಾರ್ ತಂಳ್, ಸಯ್ಯಿದ್ ಕಲ್ಲಕಟ್ಟ ತಂಳ್, ಸಯ್ಯಿದ್ ಪಿ ಎಸ್ ಎ ತಂಳ್ ಬಾಹಸನ್ ನೇತೃತ್ವ ವಹಿಸುವರು ಎಂದರು

ಜೂ.21 ರಂದು  ಮಧ್ಯಾಹ್ನ 2 ಗಂಟೆಗೆ ಸಾಮಾಜಿಕ ಸಮಾವೇಶ ಮತ್ತು 7 ಗಂಟೆಗೆ ಸನದುದಾನ ಸಮಾರಂಭ ನಡೆಯಲಿದೆ. ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ರಈಸುಲ್ ಉಲಮಾ ಸುಲೈಮಾನ್ ಮುಸ್ಲಿಯಾರ್ ಪದವಿ ಪ್ರದಾನ ಮಾಡಲಿದ್ದು, ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಘಟಿಕೋತ್ಸವ ಭಾಷಣ ಮಾಡುವರು. ಇದೇ ವೇಳೆ ಸಯ್ಯಿದ್ ಪೊಸೋಟ್ ತಂಳ್ ಅವರು ಕರ್ನಾಟಕದ ಹಾವೇರಿಯಲ್ಲಿ ಸ್ಥಾಪಿಸಿದ ಮುಈನುಸ್ಸುನ್ನ ವಿದ್ಯಾಸಂಸ್ಥೆಯ ವತಿಯಿಂದ ನೀಡಲಾಗುವ ಸಾಧಕ ಪ್ರಶಸ್ತಿಯನ್ನು ಡಾ.ಾಝಿಲ್ ರಝ್ವಿ ಹಝ್ರತ್ ಕಾವಲಕಟ್ಟೆ ಅವರಿಗೆ ಪ್ರದಾನ ಮಾಡಲಾಗುವುದು. ಜೂ.22 ರಂದು ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ಬುಖಾರಿ ತಂಳ್,  ಮಳ್ ಹರ್ ಕರ್ನಾಟಕ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ  ಕೆ.ಎಂ.ಅಬೂಬಕರ್ ಸಿದ್ದೀಕ್, ಪ್ರಮುಖರಾದ ಅಬೂಸ್ವಾಲಿಹ್ ಗೇರುಕಟ್ಟೆ, ರಹೀಂ ಸಾದಿ ಕತಾರ್ ,  ಅಬ್ದುಲ್ ರಶೀದ್ ಮಡಂತ್ಯಾರು ಉಪಸ್ಥಿತರಿದ್ದರು.