ಜಿಲ್ಲೆ

ಗುಣಾತ್ಮಕ ಚಿಂತನೆಗಳಿಂದ ಧನಾತ್ಮಕ ಫಲಿತಾಂಶ ಸಾಧ್ಯ: ಪ್ರೊ.ಎನ್.ಭಾರತಿ

ಆರ್.ಕೃಷ್ಣ

ಮೈಸೂರು: ನಗರದ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯಿಂದ ನೂತನ ವಿದ್ಯಾರ್ಥಿಯರ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿನಿಯರು ಆತ್ಮೀಯವಾಗಿ ಸ್ವಾಗತಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಭಾರತಿ ಮಾತನಾಡಿ, ಗುಣಾತ್ಮಕ ಚಿಂತನೆಗಳಿಂದ ಧನಾತ್ಮಕ ಫಲಿತಾಂಶ ಕಾಣಲು ಸಾಧ್ಯ. ಪಾಲಕರು ಮತ್ತು ಅಧ್ಯಾಪಕರು ನಿಮ್ಮ ಶೈಕ್ಷಣಿಕ ಜೀವನದ ಮಾರ್ಗದರ್ಶಕರು. ಅವರ ಸಮರ್ಪಣೆಯ ಜ್ಞಾನವನ್ನು ತಮ್ಮ ಭವಿಷ್ಯದಲ್ಲಿ ಅಳವಡಿಸಿಕೊಂಡು ಉನ್ನತ ವ್ಯಾಸಂಗ ಮಾಡುವಂತೆ ಸಲಹೆ ನೀಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಮಿಸ್ ಫ್ರೆಶರ್ಸ್ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ದಿವಿಜಾ ಭಾರದ್ವಾಜ್ ಅವರನ್ನು ಮಿಸ್ ಫ್ರೆಶರ್ ಆಗಿ, ಪ್ರಥಮ ವರ್ಷದ ಬಿಎಸ್ಸಿ ಬಿಟಿಬಿಎಂ ವಿದ್ಯಾರ್ಥಿನಿ ತ್ರೆಸಿಯಾ ವಿ.ಜಾರ್ಜ್ ಅವರನ್ನು ರನ್ನರ್ ಅಪ್ ಆದರು.

ಪ್ರಥಮ ವರ್ಷದ ಬಿಎಸ್ಸಿ ಬಿಟಿಬಿಎಂ ವಿದ್ಯಾರ್ಥಿನಿ ಎ.ಮಾನ್ಯಾ ಅವರನ್ನು ಅತ್ಯುತ್ತಮ ವೇಷಭೂಷಣ, ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಸಂಹಿತಾ ಪಿ.ಭಟ್ ಮತ್ತು ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿನಿ ಯೋಗಿತಾ ಅವರು ಬಹುಮಾನ ಪಡೆದರು.

ಐಕ್ಯೂಎಸಿ ಸಂಯೋಜಕಿ ಕೆ.ಎಸ್.ಸುಕೃತಾ, ವಿದ್ಯಾರ್ಥಿ ಕಲ್ಯಾಣ ಸಮಿತಿ ಸಂಯೋಜಕಿ ಜಿ. ಜ್ಯೋತಿಲಕ್ಷ್ಮಿ, ಅಧ್ಯಾಪಕಿ ಅಮುಲ್ಯಾ, ಗ್ರಂಥಪಾಲಕಿ ಬಿ.ಎಸ್.ಪದ್ಮಾ ಇತರರು ಇದ್ದರು.