ರವೀಂದ್ರನಾಥ ಪಟ್ಟಿ 
ಜಿಲ್ಲೆ

ನಿಯೋಗದ ಮನವಿಗೆ ಸಕಾರಾತ್ಮಕ ಸ್ಪಂದನೆ

ಗಾಯತ್ರಿ ಮಾಲಿಪಾಟೀಲ್

ರಾಯಚೂರು: ಛಲವಾದಿ ಸಮಾಜದ ಉಪ ಜಾತಿಗಳನ್ನು ಡಿ-ಗುಂಪಿನಿಂದ ಬಿ-2ಗೆ ಸೇರಿಸಲು ಪರಿಶಿಷ್ಟ ಜಾತಿಗಳ ಒಳಮೀಸಲು ವರ್ಗೀಕರಣಕ್ಕೆ ನೇಮಕವಾಗಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿಗೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮಾಲಾ, ಬೇಗಾರ್, ಬ್ಯಾಗಾರ್ ಸಮಿತಿ ಜಿಲ್ಲಾ ಸಂಚಾಲಕ ರವೀಂದ್ರನಾಥ ಪಟ್ಟಿ ಹೇಳಿದರು.

ನಗರದಲ್ಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿ ಸಮುದಾಯ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ನ್ಯಾ. ಎ.ಜೆ.ಸದಾಶಿವ ಆಯೋಗದಲ್ಲಿ ಬಿ-ಗುಂಪಿನಲ್ಲಿದ್ದ ಮಾಲಾ, ಬ್ಯಾಗಾರ್, ಬೇಗಾರ ಉಪ ಜಾತಿಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಧುಸ್ವಾಮಿ ನೇತೃತ್ವದ ಸಮಿತಿ ಅಲೆಮಾರಿಗುಂಪು ಡಿ-4ಗೆ ಸೇರಿಸಿದೆ. ಇದರಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಮನವರಿಕೆ ಮಾಡಲಾಗಿದೆ. ನ್ಯಾ.ನಾಗಮೋಹನದಾಸ ಅವರು ಅನ್ಯಾಯದ ಪರವಾಗಿ ದನಿ ಎತ್ತಿರುವುದನ್ನು ಸ್ವಾಗತಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಪ್ರಮುಖರಾದ ಎಂ.ಆರ್.ಭೇರಿ, ಜಂಬಣ್ಣ ದೊಡ್ಡಿ, ಯಲ್ಲಪ್ಪ ಬೊಮ್ಮನಾಳ, ರಾಜು ಪಟ್ಟಿ, ಚಂದ್ರಶೇಖರ ವಕೀಲ, ಪರಶುರಾಮ ಇದ್ದರು.