ಜಿಲ್ಲೆ

ಏರುತ್ತಲೇ ಸಾಗಿದೆ ಪಾಸಿಟಿವ್ ಸಂಖ್ಯೆ

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಕರೊನಾ ಮಹಾಸ್ಪೋಟಗೊಂಡಿದ್ದು 146 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. 34 ಜನರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಒಬ್ಬ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

ಈವರೆಗೆ 1,186 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 604 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 28 ಜನರು ಮೃತಪಟ್ಟಿದ್ದಾರೆ. 588 ಪ್ರಕರಣಗಳು ಸಕ್ರಿಯವಾಗಿವೆ.

ಹಿರೇಕೆರೂರ ಪಟ್ಟಣ, ತಾಲೂಕಿನ ಜೋಗಿಹಳ್ಳಿ, ಮೇದೂರು, ಬಾಳಂಬೀಡ ಕ್ರಾಸ್, ಬಸವನ ಬೀದಿ, ಬಸವೇಶ್ವರ ನಗರ, ರಟ್ಟಿಹಳ್ಳಿ ತರಳಬಾಳು ಬಡಾವಣೆ ಸೇರಿ 17 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಹಾವೇರಿ ನಗರದ ಗುತ್ತಲ ರಸ್ತೆ, ಕಂಚಾರಗಟ್ಟಿ, ಗುತ್ತಲ, ವಿದ್ಯಾನಗರದ, ಪುರದ ಓಣಿ, ನಾರಾಯಣಚಾಳ, ಅಶ್ವಿನಿನಗರ, ಎಂ.ಜಿ. ರಸ್ತೆ, ಸಿದ್ಧಾರೂಢ ಕಾಲನಿ, ಶಿವಲಿಂಗೇಶ್ವರ ನಗರ, ಜಿಲ್ಲಾ ಆಸ್ಪತ್ರೆ ಸ್ಪಾಫ್ ನರ್ಸ್, ಪೊಲೀಸ್ ವಸತಿ ಗೃಹ, ಕುರಬಗೇರಿ, ದಾನೇಶ್ವರಿ ನಗರ, ಅಕ್ಕಿಪೇಟೆ, ಹಾವನೂರ ಸೇರಿ 27 ಜನರಿಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರ ನಗರದ ಚೌಡದಾನೇಶ್ವರಿ ನಗರ, ಗೌರಿಶಂಕರ ನಗರ, ಮಾರುತಿ ನಗರ, ಮೃತ್ಯುಂಜಯ ನಗರ, ಕೋಟೆ ಪ್ರದೇಶ, ಚರ್ಚ್ ರಸ್ತೆ, ಬನಶಂಕರಿ ನಗರ, ಎಂಸಿಎಚ್ ಕಾಲನಿ, ಸಿದ್ದೇಶ್ವರ ನಗರ, ಪಂಪಾನಗರ, ಕೆಎಚ್​ಬಿ ಕಾಲನಿ, ಗೌಳಿಗಲ್ಲಿ, ಪಟ್ಟಣಶೆಟ್ಟಿ ಓಣಿ, ಸುಣ್ಣೆಖಾನ ಆಸ್ಪತ್ರೆ, ಕಂಚಗಾರ ಓಣಿ, ಹಲಗೇರಿ ರಸ್ತೆ, ಉಮಾಶಂಕರ ನಗರ, ಈಶ್ವರ ನಗರ, ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಚಾಲಕ, ಎಸ್.ಆರ್.ಕೆ. ಲೇಔಟ್, ಕಮಲ ನಗರ, ಬೆಣ್ಣೇರ ಓಣಿ, ಹುಲ್ಲತ್ತಿ, ಹಿರೇಬಿದರಿ, ಕೋಟಿಹಾಳ, ಬಿಲ್ಲಹಳ್ಳಿ, ಸರವಂದ, ದೇವರಗುಡ್ಡ, ಸುಣಕಲ್ಲಬಿದರಿ, ಗುಡ್ಡದ ಆನ್ವೇರಿ, ಕುಮಾರಪಟ್ಟಣ, ಬೆಣ್ಣಿಹಳ್ಳಿ, ಇಟಗಿ, ಮುದೇನೂರ ಗ್ರಾಮದಲ್ಲಿ ಸೋಂಕು ಪತ್ತೆಯಾಗಿದೆ.

ಸವಣೂರ ಪಟ್ಟಣದ ಹಾವಣಗಿ ಪ್ಲಾಟ್, ಸರ್ಕಾರಿ ಆಸ್ಪತ್ರೆ ವೈದ್ಯೆ, ಖಜಕಾರ ಓಣಿ, ನಿರಂಜನ ನಗರ, ಮೆಳ್ಳಾಗಟ್ಟಿ, ಹಿರೇಮೆಳ್ಳಿಹಳ್ಳಿ, ಕಲ್ಮಡವು ಗ್ರಾಮದಲ್ಲಿ ಸೋಂಕು ದೃಢಪಟ್ಟಿದೆ.

ಬಂಕಾಪುರದ ಕತೀಬ ನಗರ, ಶಾಬಜಾರ, ಕೊಟ್ಟಿಗೇರಿ ಓಣಿ, ಗಂಗಿಬಾವಿ ಕೆಎಸ್​ಆರ್​ಪಿಯ ಇಬ್ಬರು ಪೇದೆಗಳು, ಶಿಗ್ಗಾಂವಿ ಮೌಲಾಲಿ ಗಲ್ಲಿ, ಮೆಹಬೂಬ ನಗರ, ಹುಲಗೂರ, ಚಾಕಾಪುರ ಗ್ರಾಮದಲ್ಲಿ ಸೋಂಕು ದೃಢಪಟ್ಟಿದೆ.

ಬ್ಯಾಡಗಿ ಪಟ್ಟಣದ ತಳವಾರ ಓಣಿ, ಪೊಲೀಸ್ ವಸತಿಗೃಹ, ತಾಲೂಕಿನ ಅಗಸನಹಳ್ಳಿ, ಬುಡಪನಹಳ್ಳಿ, ಕಲ್ಲೇದೇವರು, ಅರಬಗೊಂಡದಲ್ಲಿ ಸೋಂಕು ಖಚಿತವಾಗಿದೆ.

ಗುಣವಾದವರ ವಿವರ: ಸವಣೂರ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ತಲಾ 1, ಶಿಗ್ಗಾಂವಿ ಹಾಗೂ ರಾಣೆಬೆನ್ನೂರಿನಲ್ಲಿ ತಲಾ 3, ಹಾನಗಲ್ಲ ತಾಲೂಕಿನಲ್ಲಿ 5, ಬ್ಯಾಡಗಿ 7 ಹಾಗೂ ಹಾವೇರಿ ತಾಲೂಕಿನಲ್ಲಿ 14 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ.

ಓರ್ವನ ಸಾವು: ಹಾವೇರಿ ಬಸವೇಶ್ವರ ನಗರದ ಎ ಬ್ಲಾಕ್ 13ನೇ ಕ್ರಾಸ್​ನ 58 ವರ್ಷದ ಪುರುಷ ಜು. 31ರಂದು ಜಿಲ್ಲಾಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಉಸಿರಾಟದ ತೊಂದರೆಯಿಂದ ಜು. 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್​ನಿಂದ ಸ್ವ್ಯಾಬ್ ಟೆಸ್ಟ್ ಮಾಡಿದಾಗ ಸೋಂಕು ದೃಢಪಟ್ಟಿತ್ತು.