ಜಿಲ್ಲೆ

ಸಕಾರಾತ್ಮಕ ಸಂವಹನದಿಂದ ಕಲಿಕೆಗೆ ಉತ್ತೇಜನ

Manikya M

ಬೆಳ್ತಂಗಡಿ: ಶಿಕ್ಷಕರ ಮತ್ತು ಪಾಲಕರ ನಡುವಿನ ಸಕಾರಾತ್ಮಕ ಸಂವಹನ ಮಗುವಿನ ಕಲಿಕೆ ಮೇಲೆ ಪರಿಣಾಮ ಬೀರುವುದರೊಂದಿಗೆ ಕಲಿಕಾ ವ್ಯವಸ್ಥೆಯಲ್ಲಿ ಮಗುವಿನ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ. ಪಾಲಕರು ವಿದ್ಯಾರ್ಥಿಗಳಿಗೆ ಆರ್ಥಿಕ, ಸಾಮಾಜಿಕ ಬೆಂಬಲದೊಂದಿಗೆ ಮಾನಸಿಕ ಬೆಂಬಲ ನೀಡಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಪ್ರಾಧ್ಯಾಪಕ ಮಂಜು ಆರ್. ಹೇಳಿದರು.

ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್.ಇಡಿ)ಸಂಸ್ಥೆಯಲ್ಲಿ ನಡೆದ ಪಾಲಕರು ಮತ್ತು ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು. ಸಹಪ್ರಾಧ್ಯಾಪಕ ತಿರುಮಲೇಶ್ ರಾವ್ ಮಾತನಾಡಿದರು. ಸಹಪ್ರಾಧ್ಯಾಪಕಿ ವಿದ್ಯಾಶ್ರೀ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕಿ ಅನುಷಾ ಡಿ.ಜೆ. ಸ್ವಾಗತಿಸಿದರು. ಪ್ರಿಯದರ್ಶಿನಿ ವಂದಿಸಿದರು. ಪ್ರಶಿಕ್ಷಣಾರ್ಥಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.