ಸಿದ್ದಾಪುರ ಸಮೀಪದ ಉಳೇನೂರು ಗ್ರಾಪಂ ನೂತನ ಅಧ್ಯಕ್ಷ ಶಿವರಾಯನಗೌಡ ಹಾಗೂ ಉಪಾಧ್ಯಕ್ಷೆ ದ್ಯಾವಮ್ಮ ಅಧಿಕಾರ ಪದಗ್ರಹಣ ಮಾಡಿದರು. ಪ್ರಮುಖರಾದ ಶರಣಪ್ಪ ಸಾಹುಕಾರ ಕಕ್ಕರಗೋಳ, ಹುಲುಗಪ್ಪ ಪಾಳೆ, ಈರಣ್ಣ ಈಡಿಗ, ಫಕೀರಪ್ಪ ಕಾರಟಗಿ ಇತರರಿದ್ದರು. 
ಜಿಲ್ಲೆ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

ಪ್ರವೀಣ ಉದುಸಾ ದಲಬಂಜನ್

ಸಿದ್ದಾಪುರ: ಸಮೀಪದ ಉಳೇನೂರು ಗ್ರಾಪಂ ಅಧ್ಯಕ್ಷರಾಗಿ ಶಿವರಾಯನಗೌಡ ಹಾಗೂ ಉಪಾಧ್ಯಕ್ಷೆಯಾಗಿ ದ್ಯಾವಮ್ಮ ಸೋಮವಾರ ಅಧಿಕಾರ ಪದಗ್ರಹಣ ಮಾಡಿದರು.

ಅಧ್ಯಕ್ಷ ಶಿವರಾಯನಗೌಡ ಮಾತನಾಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಧಿಕಾರ ಯಾರಿಗೂ ಶಾಶ್ವತವಲ್ಲ. ಎಲ್ಲರನ್ನೂ ವಿಶ್ವಾಸ ಪಡೆಯುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತೇನೆ ಎಂದರು.

ಪ್ರಮುಖರಾದ ಶರಣಪ್ಪ ಸಾಹುಕಾರ ಕಕ್ಕರಗೋಳ, ಹುಲುಗಪ್ಪ ಪಾಳೆ, ಈರಣ್ಣ ಈಡಿಗ, ಫಕೀರಪ್ಪ ಕಾರಟಗಿ, ಕನಕರಾಯ ಪಾಟೀಲ್, ಖಾಸೀಂ ಸಾಬ್, ರುದ್ರಪ್ಪ, ಚಂದ್ರಗೌಡ, ವಿರೂಪಾಕ್ಷಗೌಡ ಬೆನ್ನೂರು, ಮಲ್ಲಿಕಾರ್ಜುನ, ವೀರನಗೌಡ ಇದ್ದರು.