ಲೋಕಾಪುರ ಸಮೀಪದ ವೆಂಕಟಾಪುರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವಿಷ್ಣು ವರ್ಚಗಲ್ಲ ಮಾತನಾಡಿದರು. ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ರಾಹುಲ್ ಗುಡೂರ, ಭಾಗ್ಯಶ್ರೀ ಪಾಟೀಲ ಇತರರಿದ್ದರು. 
ಜಿಲ್ಲೆ

ಅಪೌಷ್ಟಿಕತೆ ನಿವಾರಣೆಗೆ ‘ಪೋಷಣ್’ ಸಹಕಾರಿ

Vijayapura - Desk - Gurappa Lokuri

ಲೋಕಾಪುರ: ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕ ಕೊರತೆ ನೀಗಿಸಲು ಸರ್ಕಾರ ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಹೇಳಿದರು.

ಸಮೀಪದ ವೆಂಕಟಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರು ಹಾಗೂ ಮಕ್ಕಳು ಸರ್ಕಾರದ ಪೋಷಣ್ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪೋಷಣ್ ಅಭಿಯಾನದ ತಾಲೂಕು ಸಂಯೋಜಕ ರಾಹುಲ್ ಗುಡೂರ ಮಾತನಾಡಿ, ಸತ್ಪ್ರಜೆಗಳನ್ನು ರೂಪಿಸಲು ಗರ್ಭಾವಸ್ಥೆಯಿಂದಲೇ ಮಹಿಳೆಯರಿಗೆ ಸತ್ವಯುತ ಆಹಾರ ನೀಡುವುದು. ಸ್ವಚ್ಛ ನೀರು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದರು.

ಜಾಲಿಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಷ್ಣು ವರ್ಚಗಲ್ಲ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಊಟ ಮಾಡುವಾಗ ತಟ್ಟೆಯಲ್ಲಿ ಹಸಿರು ತರಕಾರಿ ಹಸಿರು ಸೊಪ್ಪು, ಮೊಳಕೆ ಕಾಳುಗಳು, ಹಣ್ಣುಗಳು, ಹಳದಿ ಬಣ್ಣದ ಹಣ್ಣುಗಳು ಹಾಲು ಮೊಟ್ಟೆ ಸೇವಿಸುವುದರಿಂದ ರಕ್ತ ಹೀನತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುನೀಲ ಬೆನ್ನೂರ ಮಾತನಾಡಿದರು.

ಮಕ್ಕಳ ಪಾಲಕರು, ಸೀ ಶಕ್ತಿ ಸಂಘದ ಸದಸ್ಯರು, ವಿವಿಧ ಬಗೆಯ ತಿಂಡಿ ತಿನ್ನಿಸುಗಳನ್ನು ತಯಾರಿಸಿದ್ದರು.
ಎಚ್.ಎಸ್. ದಾಸರ, ಪಪಂ ಆರೋಗ್ಯ ನಿರೀಕ್ಷಕ ಭಾಗ್ಯಶ್ರಿ ಪಾಟೀಲ, ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಬಿ.ಜೆ. ನದಾಫ್, ಎಂ.ಐ. ಕಂಬಾರ, ಕಿಲ್ಲಾ ಹೊಸಕೋಟಿ, ಆರೋಗ್ಯ ಇಲಾಖೆಯ ಸಿಎಚ್‌ಒ ಶ್ರೇಯಾ ಹೊಸಕೋಟಿ, ಪರಶುರಾಮ ದಾನಿ, ಎಂ.ಎ. ಕುಳ್ಳೋಳ್ಳಿ, ಎಸ್.ಎಂ. ಕಬ್ಬೂರ, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.