ಮಂಡ್ಯ: ಪೋಷಣಾ ಅಭಿಯಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಮಹಿಳಾ ಮತ್ತು ಆರೋಗ್ಯ, ಮಹಿಳಾ ಮತ್ತು ಶಿಕ್ಷಣ, ಮಕ್ಕಳು, ಶಿಕ್ಷಣ ಮತ್ತು ಆರೋಗ್ಯ ಅದಕ್ಕಿಂತ ಹೆಚ್ಚಾಗಿ ಸಮುದಾಯದವರನ್ನು ಸೇರಿಸಿಕೊಳ್ಳುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಹೇಳಿದರು.
ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಗರದ ಬಾಲ ಭವನದಲ್ಲಿ ಆಯೋಜಿಸಿದ್ದ ಫೋಷಣಾ ಅಭಿಯಾನದ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು. ಯೋಜನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಮಾತನಾಡಿ, ದೇಶದಲ್ಲಿ ಹುಟ್ಟುವಂತಹ ಮಕ್ಕಳು ವಯಸ್ಸಿಗೆ ತಕ್ಕನಾಗಿ ಬೆಳವಣಿಗೆ ಯಾಗುವುದು ಸಾಮಾನ್ಯ ವಾಗಿರುತ್ತದೆ. ವಯಸ್ಸಿಗಿಂತ ಮಕ್ಕಳ ತೂಕ ಕಡಿಮೆ ಇರುತ್ತದೆ ಅಂತವರನ್ನು ಕಡಿಮೆ ತೂಕದ ಮಕ್ಕಳು ಎಂದು ನಿರ್ಧಾರ ಮಾಡಲಾಗುತ್ತದೆ ಎಂದರು.
ಸಿಡಿಪಿಒ ಎಂ.ಕೆ.ಕುಮಾರಸ್ವಾಮಿ, ನಂಜಮ್ಮಣ್ಣಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ್, ನಿರೂಪಣಾಧಿಕಾರಿ ಕುಮಾರ್, ಅಶೋಕ್, ಮಹದೇವ ಇತರರಿದ್ದರು.