ಮುದ್ದೇಬಿಹಾಳ ಪಟ್ಟಣದಲ್ಲಿರುವ ಶಿವಾಜಿ ವತ್ತದಲ್ಲಿ ಧ್ವಜಾರೋಹಣ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಮುಖಂಡ ಸಂಗನಗೌಡ ಬಿರಾದಾರ (ಜಿಟಿಸಿ) ಚಾಲನೆ ನೀಡಿದರು. ಎಂ.ಎನ್. ಮದರಿ, ಎಂ.ಬಿ. ನಾವದಗಿ, ಭರತ್ ಭೋಸಲೆ, ನೇತಾಜಿ ನಲವಡೆ, ಹಣಮಂತ ನಲವಡೆ, ಶಿವಾಜಿ ಬಿಜಾಪೂರ, ರವಿ ಭೋಷಲೆ, ಸತೀಶ ಕುಲಕರ್ಣಿ, ಕಾಶಿಬಾಯಿ ರಾಂಪೂರ, ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಕ್ಷತ್ರೀಯ ಮರಾಠಾ ಸಮಾಜದ ಪ್ರತಿನಿಗಳು ಇದ್ದಾರೆ. 
ಜಿಲ್ಲೆ

ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ

ಗಿರೀಶ ಸಗರ

ಮುದ್ದೇಬಿಹಾಳ: ಪಟ್ಟಣದಲ್ಲಿ ತಾಲೂಕಾಡಳಿತ ಮತ್ತು ಕ್ಷತ್ರೀಯ ಮರಾಠಾ ಸಮಾಜ ವತಿಯಿಂದ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಸೋಮವಾರ ಬೆಳಗ್ಗೆ ಹಳೇ ತಹಶೀಲ್ದಾರ್ ಕಚೇರಿ ಹತ್ತಿರ ಎಂಜಿ ರಸ್ತೆಯಲ್ಲಿರುವ ಶಿವಾಜಿ ವತ್ತವನ್ನು ಅಲಂಕರಿಸಿ, ಅಲ್ಲಿ ಮುಖಂಡ ಸಂಗನಗೌಡ ಬಿರಾದಾರ (ಜಿಟಿಸಿ), ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್. ಮದರಿ ಜಂಟಿಯಾಗಿ ಧ್ವಜಾರೋಹಣ ನಡೆಸುವ ಮೂಲಕ ಶಿವಾಜಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.

ಬಸವೇಶ್ವರ ವತ್ತ, ರಾಣಿ ಚನ್ನಮ್ಮ ವತ್ತ ಮಾರ್ಗವಾಗಿ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದ ಎಲ್ಲರೂ ಕೇಸರಿ ಶಾಲು, ಟೋಪಿ ಧರಿಸಿದ್ದರು. ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರ ಮತ್ತು ಕಂಚಿನ ಪುತ್ಥಳಿಯನ್ನು ಪೂಜಿಸಿ, ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.

ಎಂಜಿವಿಸಿ ಕಾಲೇಜಿನ ಉಪನ್ಯಾಸಕ ಡಾ. ಪ್ರಕಾಶ ನರಗುಂದ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು. ಕ್ಷತ್ರೀಯ ಸಮಾಜದ ಪ್ರಮುಖರಾದ ರಾಜನಾರಾಯಣ ನಲವಡೆ, ನೇತಾಜಿ ನಲವಡೆ, ಉದಯಸಿಂಗ ರಾಯಚೂರ ಮಾತನಾಡಿದರು.

ತಹಶೀಲ್ದಾರ್ ಪ್ರತಿನಿಧಿಯಾಗಿ ಉಪ ತಹಶೀಲ್ದಾರ್ ಎಂ.ಎ. ಬಾಗೇವಾಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು, ಕ್ಷತ್ರೀಯ ಮರಾಠಾ ಸಮಾಜದ ಮುಖಂಡರು, ಹಲವರು ಪಾಲ್ಗೊಂಡಿದ್ದರು.

ನಂತರ ಬಸವನಗರದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನಡೆದ ತೊಟ್ಟಿಲು ಕಾರ್ಯದಲ್ಲಿ ಕ್ಷತ್ರೀಯ ಮರಾಠ ಸಮಾಜದ ಮಹಿಳೆಯರು ಪಾಲ್ಗೊಂಡಿದ್ದರು.

ಗಣ್ಯರಾದ ಎಂ.ಬಿ. ನಾವದಗಿ, ಕಾಶಿಬಾಯಿ ರಾಂಪೂರ, ಸತೀಶ ಕುಲಕರ್ಣಿ, ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಹನಾ ಬಡಿಗೇರ, ಸಮಾಜದ ಮುಖಂಡರಾದ ರವಿ ಭೋಸಲೆ, ಹಣಮಂತ ನಲವಡೆ, ಮಾರುತಿ ನಲವಡೆ, ಅಜಯ್ ಭೋಸಲೆ, ಕಿರಣ ದುದಾನಿ, ಸಂತೋಷ ಚವ್ಹಾಣ, ಅನೀಲ ಜಾಧವ, ವಿಶ್ವನಾಥ ಶಿಂಧೆ, ರಾಘವೇಂದ್ರ ಘಾಟಗೆ, ರಾಜು ಜಾಧವ, ಶಿವು ಬಿಜಾಪೂರ, ಭಾರತಿ ನಲವಡೆ, ಶೋಭಾ ಘಾಟಗೆ, ಅಂಬಿಕಾ ಜಾಧವ, ಯಶವಂತ ಕಲಾಲ ಹಲವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.