ಮುಂಡರಗಿ: ತಾಲೂಕಿನ ಬೀಡನಾಳ ಗ್ರಾಮದಲ್ಲಿ ಕನಕದಾಸ ಜಯಂತಿ ಅಂಗವಾಗಿ ಭಾನುವಾರ ಪೂರ್ಣಕುಂಭದೊಂದಿಗೆ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಶ್ರೀ ಮಾರುತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೀರದೇವರ ದೇವಸ್ಥಾನದವರೆಗೆ ನಡೆಯಿತು.
ಕನಕದಾಸರ ಭಾವಚಿತ್ರದೊಂದಿಗೆ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆಯನ್ನೂ ಮಾಡಲಾಯಿತು. ಬೀಡನಾಳ ಗ್ರಾ.ಪಂ. ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಶಿವಾನಂದ ಕರಕಣ್ಣವರ, ಹನುಮಂತ ಛಬ್ಬಿ, ಬಸಪ್ಪ ಕರಕಣ್ಣವರ, ಲೋಹಿತ್ ಪುರದ, ರಾಜು ಉಜರತ್ತಿ, ದೇವಕ್ಕ ಪುರದ, ಗಂಗವ್ವ ವಡ್ಡಟ್ಟಿ ಇತರರು ಇದ್ದರು.