ಸಂಡೂರು: ನಗರದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಮೆರವಣಿಗೆಗೆ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಶ್ರೀ ಪ್ರಭುಸ್ವಾಮಿ ಚಾಲನೆ ನೀಡಿದರು. ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ಗುಡೆಕೋಟೆ, ಉಪಾಧ್ಯಕ್ಷೆ ನಿರ್ಮಲಾ ಗೋನಾಳ, ಖಜಾಂಚಿ ಗಾಣಿಗರ ಸರೋಜಾ, ಕಾರ್ಯದರ್ಶಿ ವಿಶಾಲಾಕ್ಷಿ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ಎಂ.ಮಂಜುನಾಥ, ಉಪಾಧ್ಯಕ್ಷ ಪ್ರಭುಗೌಡ, ವಕೀಲ ಗುಡೇಕೋಟೆ ನಾಗರಾಜ, ಪ್ರಮುಖರಾದ ಪ್ರಶಾಂತ, ಶರಣಯ್ಯ, ಅಂಕಮನಾಳ ಕೊಟ್ರೇಶಿ, ಗೋನಾಳ ಬಸವರಾಜ, ಶಿವಕುಮಾರ ಮುದೇನೂರು, ಯಶವಂತನಗರದ ಕಾಗೆ ಮಂಜುನಾಥ, ಅರಳಿ ಕುಮಾರಸ್ವಾಮಿ, ಅಂಕಮನಾಳ್ ಶಾಂತಮ್ಮ ಇತರರಿದ್ದರು.