ಗಂಗಾವತಿ: ನಗರದ ವಿರುಪಾಪುರ ತಾಂಡಾದ ಶ್ರೀ ಮರಿಯಮ್ಮ ದೇವಿ ಹಾಗೂ ಶ್ರೀ ಸೇವಾಲಾಲ್ ದೇವಾಲಯ ಆವರಣದಲ್ಲಿ ಬಂಜಾರ ಸಮಾಜದಿಂದ ಸಂತ ಶ್ರೀ ಸೇವಾಲಾಲರ 286ನೇ ಜಯಂತ್ಯುತ್ಸವ ಶನಿವಾರ ಆಚರಿಸಲಾಯಿತು.
ಜಯಂತಿ ನಿಮಿತ್ತ ನಗರದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಸೇವಾಲಾಲ್ ವೃತ್ತದವರೆಗೆ ಅದ್ದೂರಿಯಾಗಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕುಂಭ, ಕಳಸ, ಆರಿವಾದ್ಯ, ಸಂಪ್ರದಾಯಕ ಲಂಬಾಣಿ ನೃತ್ಯಗಳು ಮೆರುಗು ನೀಡಿದವು. ಪುರುಷರು, ಮಹಿಳೆಯರು, ಯುವಕರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಂತರ ದೇವಾಲಯ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿದರು.
ಸಮಾಜದ ಧರ್ಮಗುರು ಗೋಸಾಯಿಬಾಬಾ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣನಾಯ್ಕ, ನಗರಸಭೆ ಮಾಜಿ ಸದಸ್ಯ ರಾಮಾನಾಯ್ಕ, ಗೋರ ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೋಗೋರ್, ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡುನಾಯ್ಕ, ಎಪಿಎಂಸಿ ಮಾಜಿ ಸದಸ್ಯ ತಿಪ್ಪಣ್ಣ ದೇವಪ್ಪ, ಪ್ರಮುಖರಾದ ಕೆ.ಆರ್ ಕೀರಪ್ಪ , ಪ್ರಕಾಶ್ ರಾಥೋಡ, ತಾವರೆಪ್ಪ ಕಾರಾಬಾರಿ, ತುಳಜಾರಾಂ ನಾಯ್ಕ, ಹನುಮಂತಪ್ಪ , ಕಷ್ಣ ನಾಯ್ಕ, ರವಿ ಇತರರಿದ್ದರು.
ತಾಲೂಕು ಕಚೇರಿಯಲ್ಲಿ ಆಚರಣೆ: ನಗರದ ತಾಲೂಕಾಡಳಿತ ಸೌಧದಲ್ಲೂ ಸಂತ ಶ್ರೀಸೇವಾಲಾಲ್ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿದರು. ಉಪತಹಸೀಲ್ದಾರರಾದ ಪ್ರಕಾಶ, ಕೃಷ್ಣವೇಣಿ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಪವನಕುಮಾರ, ಶ್ರೀಕಂಠೇಶ, ನಾಗರತ್ನಾ, ಗಾಯತ್ರಿ, ಶ್ರೀರಾಮ ಜೋಶಿ, ಮಂಜುನಾಥ ಇತರರಿದ್ದರು.