ಜಿಲ್ಲೆ

60 ಪಿಒಪಿ ಗಣೇಶ ಮೂರ್ತಿ ವಶಕ್ಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಹಾಗೂ ಜಿಲ್ಲೆಗೆ ಬಾರದಂತೆ ತಡೆಯಲು ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದರೂ ಮೂರ್ತಿಗಳು ಬರುತ್ತಲೇ ಇವೆ.

ಈಗಾಗಲೇ ಹುಬ್ಬಳ್ಳಿ-ಧಾರವಾಡ ವಿವಿಧೆಡೆ 218 ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಬುಧವಾರ ಮತ್ತೆ 60 ಮೂರ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ಅಧ್ಯಾಪಕ ನಗರದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಕೆಎಸ್​ಪಿಸಿಬಿ ಅಧಿಕಾರಿಗಳು ಬುಧವಾರ ಜಂಟಿ ಕಾರ್ಯುಚರಣೆ ನಡೆಸಿ, 60 ಪಿಒಪಿ ಗಣಪತಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯುಚರಣೆಯಲ್ಲಿ ಕೆಎಸ್​ಪಿಸಿಬಿ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್., ಆರೋಗ್ಯ ನಿರೀಕ್ಷಕ ಸುರೇಶ ರಾಥೋಡ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.