ಜಿಲ್ಲೆ

ಕಳಪೆ ಬಿತ್ತನೆ ಬೀಜ ಪೂರೈಸಿದ್ದಕ್ಕೆ ಪರಿಹಾರ ನೀಡಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಲಹೊಂಗಲ: ಕಳಪೆ ಬಿತ್ತನೆ ಬೀಜ ಹಾಗೂ ಕೀಟನಾಶಕ ಪೂರೈಕೆಯಿಂದ ಪ್ರಸಕ್ತ ಹಂಗಾಮಿನ ಸೋಯಾಬೀನ್​, ಹೆಸರು, ಹತ್ತಿ ಮತ್ತು ಉದ್ದು ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂದ ನೇತೃತ್ವದಲ್ಲಿ ರೈತರು ಶನಿವಾರ ಬೃಹತ್​ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿ, ಬೆಲಹೊಂಗಲ, ಸವದತ್ತಿ, ಚನ್ನಮ್ಮನ ಕಿತ್ತೂರು, ಗೋಕಾಕ, ರಾಮದುರ್ಗ ತಾಲೂಕಿನಲ್ಲಿ ಸೋಯಾಬೀನ್​, ಹೆಸರು, ಹತ್ತಿ ಹಾಗೂ ಉದ್ದಿನ ಬೆಳೆ ಕೀಡೆ, ಹುಳುಬಾಧೆಯಿಂದ ಹಾಳಾಗಿವೆ. ಸುಮಾರು 4ರಿಂದ 5 ಬಾರಿ ಔಷಧ ಸಿಂಪಡಿಸಿದರೂ ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ರೈತರ ಹಿತದೃಷ್ಟಿಯಿಂದ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರಾಜ್ಯ ಸರ್ಕಾರ ಅನ್ನದಾತರ ಪರ ನಿಲುವು ಹೊಂದಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ರೈತರ ಸಮಸ್ಯೆ ಬಗ್ಗೆ ಸಮಾಲೋಚನೆ ಮಾಡಿದ್ದೇನೆ. ಬೆಳೆಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸಾಧ್ಯವಾದಷ್ಟು ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

ರೈತ ಮುಖಂಡರಾದ ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಇಂಗಳಗುಪ್ಪಿ ಕಷ್ಣೇಗೌಡ, ಬಸನಗೌಡ ಪಾಟೀಲ, ಸುರೇಶ ವಾಲಿ, ಮಹಾಂತೇಶ ಕಮತಗಿ, ಶ್ರೀಕಾಂತ ಶಿರಹಟ್ಟಿ, ಉಪವಿಭಾಗಾಧಿಕಾರಿ ಪ್ರದಿಪ ಜೆನ, ತಹಸೀಲ್ದಾರ್​ ಹನಮಂತ ಶಿರಹಟ್ಟಿ, ಕೃಷಿ ಅಧಿಕಾರಿ ಬಸವರಾಜ ದಳವಾಯಿ, ಜಂಟಿ ನಿರ್ದೇಶಕ ಎಚ್​.ಡಿ. ಕೊಳೇಕರ, ಡಿವೆಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪ್ರಮೋದ ಯಲಿಗಾರ ಇತರರಿದ್ದರು.