ಹಿರಿಯೂರು: ಬಡವರ ಆಶಾಕಿರಣ ದೇವರಾಜ ಅರಸು ಅವರ ತತ್ವ ಸಿದ್ಧಾಂತ, ಆದರ್ಶಗಳು ಅನುಕರಣೀಯ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಿ. ದೇವರಾಜ ಅರಸು ಜನ್ಮ ದಿನ್ಮಾಚರಣೆ ಸಮಾರಂಭದಲ್ಲಿ ಮಾತನಾಡಿ,
ಮಾದರಿ ಆಡಳಿತ ನಡೆಸಿ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಹಾನ್ ಚೇತನ, ಜೀತಗಾರರನ್ನು ಭೂ ಮಾಲೀಕರನ್ನಾಗಿಸಿದ ಶ್ರೇಯಸ್ಸು ಅರಸು ಅವರಿಗೆ ಸಲ್ಲುತ್ತದೆ ಎಂದರು.
ದುರ್ಬಲ ವರ್ಗದವರಿಗೆ ಆತ್ಮಸ್ಥೈರ್ಯ ತುಂಬಿ, ಸಮಾಜದಲ್ಲಿ ಸೂಕ್ತ ಸ್ಥಾನಮಾನ ಒದಗಿಸಿದರು.
ಚಿಕ್ಕ ಸಮುದಾಯದಿಂದ ರಾಜಕೀಯ ಕ್ಷೇತ್ರಕ್ಕೆ ಬಂದ ಅವರು ತಮ್ಮ ಚಾಣಕ್ಷತೆ, ಪ್ರತಿಭೆಯಿಂದ ಉನ್ನತ ಸ್ಥಾನ ಮಾನ ಅಲಂಕರಿಸಿದರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರ ಎಂದು ಬಣ್ಣಿಸಿದರು.
ಮುಖಂಡರಾದ ರಾಮಕೃಷ್ಣ, ನಿರಂಜನ್‌ಮೂರ್ತಿ, ಪ್ರಶಾಂತ್, ರಾಮು, ಕೇಶವಮೂರ್ತಿ, ಈರಣ್ಣ, ಗೋವಿಂದರಾಜು, ಮಂಜುನಾಥ, ದೇವರಾಜ್, ಶ್ರೀನಿವಾಸ, ಬಾಲಪ್ಪ ಇತರರಿದ್ದರು.