Poor clean drinking water unit in nelamangala 
ಜಿಲ್ಲೆ

ಕೆಟ್ಟ ಶುದ್ಧ ಕುಡಿಯುವ ನೀರಿನ ಘಟಕ

ಶಿವರಾಜ.ಎಂ

ಕಚೇರಿಗೆ ಬರುವ ಸಾರ್ವಜನಿಕರ ಪರದಾಟ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರದ ತಾಲೂಕು ಕಚೇರಿಯಲ್ಲಿ ಖಾಸಗಿ ಬ್ಯಾಂಕ್ ನಿರ್ಮಿಸಿರುವ ಶುದ್ಧ ನೀರಿನ ಘಟಕ ಕೆಟ್ಟಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಸಂಸ್ಥೆ ಸಹಯೋಗದಲ್ಲಿ ನಾಲ್ಕೈದು ತಿಂಗಳ ಹಿಂದೆ ತಾಲೂಕು ಕಚೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿತ್ತು. ಕಚೇರಿಗೆ ಬರುವ ನೂರಾರು ಮಂದಿ ಘಟಕ ಅವಲಂಬಿಸಿದ್ದರು. ಆದರೆ, ಅಧಿಕಾರಿಗಳು ಘಟಕ ನಿರ್ವಹಣೆಗೆ ಕಾಳಜಿ ತೋರದ ಪರಿಣಾಮ ತಿಂಗಳಿಂದ ನೀರಿನ ಘಟಕ ಕೆಟ್ಟಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಣಾಮ ಜನರು ಅಂಗಡಿಯಲ್ಲಿ ಹಣ ಕೊಟ್ಟು ನೀರು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಘಟಕವನ್ನು ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಚಿಕ್ಕಮಾರನಹಳ್ಳಿ ನಿವಾಸಿ ಅರಣ್‌ಕುಮಾರ್ ಒತ್ತಾಯಿಸಿದರು.
ಗ್ರಾಮೀಣ ಭಾಗದಿಂದ ನಿತ್ಯ ವಿವಿಧ ಕೆಲಸ ಕಾರ್ಯಗಳಿಗೆ ಸಾವಿರಾರು ಸಾರ್ವಜನಿಕರು ಬರುತ್ತಾರೆ. ಆದ್ದರಿಂದ ಕಚೇರಿ ಆವರಣದಲ್ಲಿ ಶುದ್ಧ ನೀರು ಪೂರೈಸಲು ಕೆಲ ಖಾಸಗಿ ಬ್ಯಾಂಕ್ ಲಕ್ಷಾಂತರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿಕೊಟ್ಟಿತ್ತು. ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿರುವುದು ಬೇಸರದ ಸಂಗತಿ. ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕೆಲಸ ಆಗದಿರುವ ಜತೆಗೆ ಕಚೇರಿಯಲ್ಲಿ ಕನಿಷ್ಠ ಪಕ್ಷ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸದಿರುವುದು ಬೇಸರದ ಸಂಗತಿ. ನೀರಿನ ಘಟಕವನ್ನು ದುರಸ್ತಿ ಮಾಡಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಕನ್ನಡ ರಣಧೀರರ ಪಡೆ ಅಧ್ಯಕ್ಷ ಚೇತನ್‌ಗೌಡ ಆಗ್ರಹಿಸಿದರು.