ಜಿಲ್ಲೆ

ಜೀರ್ಣೋದ್ಧಾರ ಪೂಜೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಸಮೀಪದ ಕೆರೆ ಕೊಪ್ಪಲು ಗ್ರಾಮದಲ್ಲಿರುವ ಉದ್ಭವ ಶ್ರೀ ಗೌರಿ ಶಂಕರ ದೇವಸ್ಥಾನ ಜೀಣೋದ್ಧಾರ ವಿಚಾರಕ್ಕೆ ಸಂಬAಧಿಸಿದAತೆ ಪೂರ್ವ ಪೂಜಾ ಕೈಂಕರ್ಯಗಳನ್ನು ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮಿ ನೆರವೇರಿಸಿದರು.

ಶ್ರೀ ಗೌರಿ ಶಂಕರ ದೇವಸ್ಥಾನ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿರುವ ಜಾಗದಲ್ಲಿ ನೂತನ ಕಾಮಗಾರಿ ಆರಂಭಿಸುವ ಹಿನ್ನೆಲೆಯಲ್ಲಿ ಶ್ರೀಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.

ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜು, ಕಾರ್ಯದರ್ಶಿ ರವಿ, ಉಪಾಧ್ಯಕ್ಷ ರಾಮೇಗೌಡ, ಗ್ರಾಮ ಪ್ರಮುಖರಾದ ಉದಯಕುಮಾರ್, ಡಿ.ಆರ್. ಪ್ರಭಾಕರ್, ತಿಮಪ್ಪ ರೈ, ರಾಮು, ಅಶ್ವಿನಿ, ಕುಮಾರ್, ಮಂಜುನಾಥ ಮತ್ತಿತರರು ಇದ್ದರು.