ಜಿಲ್ಲೆ

ಹುಲುಸೆ ದೊಡ್ಡಮ್ಮ ತಾಯಿಗೆ ಪೂಜೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ :

ನವರಾತ್ರಿ ಅಂಗವಾಗಿ ಕುಶಾಲನಗರ ತಾಲ್ಲೂಕು ಹುಲುಸೆ ಗ್ರಾಮದ ಅಧಿದೇವತೆ ದೊಡ್ಡಮ್ಮ ದೇವರಿಗೆ ಗ್ರಾಮದ ಮಹಿಳಾ ಭಕ್ತಗಣದಿಂದ ಗುರುವಾರ ವಿಶೇಷ ಪೂಜೆ ನೆರವೇರಿತು.

ಗ್ರಾಮದ ಹೊರ ಭಾಗದ ಬನದಲ್ಲಿನ ದೇವಾಲಯದಲ್ಲಿ ದೇವರಿಗೆ ವಿವಿಧ ಅಭಿಷೇಕಗಳು ಜರುಗಿದವು.

ಬಳಿಕ ಬಗೆ ಬಗೆಯ ಪುಷ್ಪಗಳಿಂದ ದೇವರನ್ನು ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ದೇವಾಲಯದ ಅರ್ಚಕ ಚಿತ್ರಕುಮಾರ್ ಹಾಗೂ ಮಂಜು ಪೂಜಾವಿಧಿ ನೆರವೇರಿಸಿದರು.

ಗ್ರಾಮದ ವಿವಿಧ ಸಂಘಗಳ ಪ್ರಮುಖರಾದ ಅಶ್ವಿನಿ, ಸುವರ್ಣಮ್ಮ, ರತ್ನಮ್ಮ, ಶುಭ, ಚಂದ್ರಮ್ಮ, ದ್ರಾಕ್ಷಾಯಿಣಿ, ಮಲ್ಲಿಗೆ, ರೇಶ್ಮಾ, ಚಿತ್ರಾ, ಬೇಬಿ, ಸರಿತಾ ಮೊದಲಾದವರಿದ್ದರು. ಬಳಿಕ ನೆರೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.