ದೊಡ್ಡಪುಲಿಕೊಟು ಗ್ರಾಮಸ್ಥರು ನಾಪೋಕ್ಲು-ಭಾಗಮಂಡಲ ಸೇತುವೆಯಲ್ಲಿ ನೂರಾರು ದೀಪಗಳನ್ನು ಬೆಳಗಿಸಿದರು. 
ಜಿಲ್ಲೆ

ಭಗವತಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ

ಎಂ.ರವಿ

ನಾಪೋಕ್ಲು: ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಶ್ರೀ ರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಸಮೀಪದ ದೊಡ್ಡಪುಲಿಕೊಟು ಕೋಟೆ ಭಗವತಿ ದೇವಾಲಯದಲ್ಲಿ ಸೋಮವಾರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತಿನ ಭಾಗಮಂಡಲದ ರಾಜೇಶ ಪ್ರವಚನ ನೀಡಿದರು. ಸಂಜೆ ನಾಪೋಕ್ಲು-ಭಾಗಮಂಡಲ ಸೇತುವೆಯಲ್ಲಿ ನೂರಾರು ದೀಪಗಳನ್ನು ಬೆಳಗಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.