ಜಿಲ್ಲೆ

ಮೂರು ದಿನ ವಿವಿಧ ಪೂಜಾ ವಿಧಿ-ವಿಧಾನ

ಲಿಂಗಸುಗೂರು: ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ನಿಮಿತ್ಯ ಪಟ್ಟಣದ ಗುರು ರಾಯರ ಗುರುವಾರ ಉತ್ತಾರಾರಾಧನೆ ಹಾಗೂ ರಥೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ಬೆಳಗ್ಗೆ ಧಾರ್ಮಿಕ ಕಾರ್ಯಗಳ ನಂತರ ಸಂಗೀತ, ಭಜನೆ ಮೇಳದೊಂದಿಗೆ ರಥೋತ್ಸವ ಜರುಗಿತು. ಮಠದ ವ್ಯವಸ್ಥಾಪಕ ಉಡುಪಿ ಕೃಷ್ಣಾಚಾರ್ಯ, ಗುರುರಾಜ ಮುತಾಲಿಕ್, ರಾಘವೇಂದ್ರ ಮುತಾಲಿಕ್, ಮುರಳೀಧರ ಕುಲಕರ್ಣಿ, ಲಕ್ಷ್ಮೀಕಾಂತ ದೇಶಪಾಂಡೆ, ಹನುಮೇಶ ಮುತಾಲಿಕ್, ರಾಘವೇಂದ್ರ, ದತ್ತಾತ್ರೇಯ ಶಾಸ್ತ್ರಿ, ಅಶೋಕ ದಿಗ್ಗಾವಿ, ರವಿ ಕುಲಕರ್ಣಿ, ವರದೇಂದ್ರ ದಿಗ್ಗಾವಿ, ಪವನ್, ಕೊಪ್ರೇಶ ಜೋಷಿ, ಗುರುರಾಜ ಭಜನಾ ಮಂಡಳಿ, ಗೋಪಿಗೀತಾ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಆರಾಧನೆಯ ಮೂರು ದಿನ ಶ್ರೀಮಠದಲ್ಲಿ ಸತ್ಯನಾರಾಯಣ ಪೂಜೆ, ಗೋಮಾತಾ ಪೂಜೆ, ಪ್ರಾರ್ಥನೋತ್ಸವ, ಲಕ್ಷ್ಮೀ ಪೂಜೆ, ಧನ-ಧಾನ್ಯ ಪೂಜೆ, ಸ್ವಸ್ತಿವಾಚನ, ಮಹಾಮಂಗಳಾರತಿ, ಗಜವಾಹನೋತ್ಸವ, ರಥೋತ್ಸವ, ಅಂದಣೋತ್ಸವ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆದವು.