ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ ಮತ್ತು ಜೀವಿ ಕಲಾ ಬಳಗದ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯರ ದೇವಸ್ಥಾನದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬೆಳಗ್ಗೆ 8ಕ್ಕೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.
ಪ್ರಮುಖರಾದ ಆರ್.ಎಂ. ಹಿರೇಮಠ, ವಿಶ್ವನಾಥ ಹಿರೇಗೌಡ್ರ, ಪಂಚಲಿಂಗಪ್ಪ ಕವಲೂರ, ಎಸ್.ಸಿ. ಕಮ್ಮಾರ, ಡಾ.ಎಸ್.ವಿ. ಹಿರೇಮಠ, ವಿ.ಜಿ. ಪಾಟೀಲ, ಬಸವರಾಜ ಕೆಂಧೂಳಿ, ಗದಿಗೆಯ್ಯ ಹಿರೇಮಠ, ಶಿವಾನಂದ ಬೆಂಗೇರಿ ಇತರರು ಉಪಸ್ಥಿತರಿದ್ದರು.