ಜಿಲ್ಲೆ

ಮೇ 30 ರಂದು ಸೋಡಿಗದ್ದೆ ಮಹಾಸತಿ ದೇವಿಯ ವರ್ಧಂತಿ ಉತ್ಸವ

Uttara Kannada - Subash Hegde

ಭಟ್ಕಳ: ತಾಲೂಕಿನ ಪ್ರಸಿದ್ದ ಶಕ್ತಿ ಸ್ಥಳವಾದ ಸೋಡಿಗದ್ದೆ ಮಹಾಸತಿ ಅಮ್ಮನವರ "ವರ್ಧಂತಿ ಉತ್ಸವ'ವು ಮೇ 30ರಂದು ನಡೆಯಲಿದೆ ಎಂದು ತಹಸೀಲ್ದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರದ ಸಲ್ಲುವ ವೈಶಾಖ ಕೃಷ್ಣ ಗುರುವಾರ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ "ವರ್ಧಂತಿ ಉತ್ಸವ' ವಿಜೃಂಭಣೆಯಿಂದ ಜರುಗಲಿರುವುದು. ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಬಳಿಕ ಮಹಾಮಂಗಾಳಾರತಿ ನಡೆಯಲಿದೆ. "ಮಹಾಅನ್ನಸಂತರ್ಪಣೆ" ಕಾರ್ಯಕ್ರಮ, ಸಂಜೆ 6 ರಿಂದ 9 ರ ತನಕ ಭಜನೆ ಕಾರ್ಯಕ್ರಮವಿದ್ದು ವಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಮುಡಿಗಂಧಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರರು ವಿನಂತಿಸಿದ್ದಾರೆ.