ಜಿಲ್ಲೆ

ಪೊನ್ನಣ್ಣ ನಿವಾಸಕ್ಕೆ ಆದಿಚುಂಚನಗಿರಿ ಶ್ರೀ ಭೇಟಿ

ಸುನಿಲ್ ಪೊನ್ನೇಟಿ

ವಿರಾಜಪೇಟೆ:

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಿವಾಸಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಭಾನುವಾರ ಸಂಜೆ ಭೇಟಿ ನೀಡಿದ್ದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಜಿಲ್ಲೆಗೆ ಆಗಮಿಸಿದ್ದ ಶ್ರೀಗಳನ್ನು ಶಾಸ್ತ್ರೋಕ್ತವಾಗಿ ಶಾಸಕರ ಮನೆಗೆ ಬರಮಾಡಿಕೊಳ್ಳಲಾಯಿತು. ಸಕಲ ಪೂಜಾ ವಿದಿ ವಿಧಾನಗಳನ್ನು ಪೂರೈಸಿದ ಬಳಿಕ, ಆಗಮಿಸಿದ ಭಕ್ತಾದಿಗಳಿಗೆ ಶ್ರೀಗಳು ಆಶೀರ್ವಚನ ಮಾಡಿದರು.

ಈ ಸಂದರ್ಭ ಪ್ರತಿಕ್ರಿಯಿಸಿರುವ ಪೊನ್ನಣ್ಣ, ನಾಡಿನ ಅತ್ಯಂತ ಶ್ರೇಷ್ಠ ಹಾಗೂ ಗೌರವಾನ್ವಿತ ಮಠದ ಜಗದ್ಗುರುಗಳು ನನ್ನ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ್ದು ನನ್ನ ಜೀವನವನ್ನು ಪಾವನವನ್ನಾಗಿಸಿತು.

ನನ್ನಲ್ಲಿಗೆ ಆಗಮಿಸಿ ಆಶೀರ್ವದಿಸಿದ ಪರಮಪೂಜ್ಯ ಜಗದ್ಗುರುಗಳಿಗೆ ನನ್ನ ಭಕ್ತಿ ಪೂರ್ವಕ ಅನಂತಾನAತ ಪ್ರಣಾಮಗಳು ಎಂದಿದ್ದಾರೆ.