ಜಿಲ್ಲೆ

ಪೊನ್ನಣ್ಣ ಅವರಿಗೆ ಸರ್ಕಾರಿ ನಿವೃತ್ತ ನೌಕರರಿಂದ ಗೌರವ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕರ್ನಾಟಕ ರಾಜ್ಯ ಸರ್ಕಾರದ ನಿವೃತ್ತ ನೌಕರರ ವೇದಿಕೆಯ ಪದಾಧಿಕಾರಿಗಳು ಗುರುವಾರ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ಶಾಸಕರ ಕಚೇರಿಯಲ್ಲಿ ಸನ್ಮಾನಿಸಿದರು. 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ ಎ.ಎಸ್. ಪೊನ್ನಣ್ಣ ಅವರನ್ನು ಅಭಿನಂದಿಸಿದ ಪದಾಧಿಕಾರಿಗಳು ಇದೇ ಸಂಧರ್ಭದಲ್ಲಿ ನಿವೃತ್ತ ನೌಕರಿಗೆ ಸಲ್ಲಬೇಕಾದ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ನಿವೇದನೆ ಸಲ್ಲಿಸಿದರು. ನಿವೃತ್ತ ನೌಕರರ ನಿವೇದನೆ ಸ್ವೀಕರಿಸಿದ ಪೊನ್ನಣ್ಣ, ಬೇಡಿಕೆ ಸಮಂಜಸ ಮತ್ತು ಸಮಯೋಚಿತವಾಗಿದ್ದು ಖಂಡಿತವಾಗಿ ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಚರ್ಚಿಸಿ ಬಗೆ ಹರಿಸುವ ಭರವಸೆ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ವೇದಿಕೆಯ ಪ್ರಧಾನ ಸಂಚಾಲಕ ಪಿ.ಎಸ್. ಜನಾರ್ದನ, ಮುಖ್ಯ ಸಂಚಾಲಕÀ ಜಿ.ಎಂ.ಚಿನ್ನಯ್ಯ, ಜಿಲ್ಲಾ ಸಂಚಾಲಕ ಎಂ.ಎA. ಬೆಳ್ಯಪ್ಪ, ಪಿ.ಎಸ್.ಸೋಮಯ್ಯ, ದೇವರಾಜ್ ಹೆಚ್.ಇ., ಕೆ.ಪಿ.ಮೋಹನ್ ಇದ್ದರು.