ಜಿಲ್ಲೆ

ಧರ್ಮಸ್ಥಳದಲ್ಲಿ ಪೊಣ್ಣಂ ಪ್ರಭಾಕರ್ ವಿಶೇಷ ಪೂಜೆ

ಸೌಮ್ಯ ಆರ್

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆಲಂಗಾಣದ ಸಾರಿಗೆ ಸಚಿವ ಪೊಣ್ಣಂ ಪ್ರಭಾಕರ್ ಮತ್ತು ಕುಟುಂಬದವರು ನ.21ರಂದು ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಸಚಿವರ ಜತೆಯಲ್ಲಿ ಪತ್ನಿ ಪ್ರಮೀಳಾ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೈಸೂರಿನ ಉದ್ಯಮಿ ಎಂ.ಕೆ.ಪೋತ್‌ರಾಜ್, ಉದ್ಯಮಿ ಕಲಬುರಗಿಯ ಸಂತೋಷ್ ಗುತ್ತೆದಾರ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಉಜಿರೆ, ಬೆಳ್ತಂಗಡಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ನವೀನ್ ಗೌಡ ಸವಣಾಲು, ಕಾಂಗ್ರೆಸ್ ಮುಖಂಡ ರಾಘವೇಂದ್ರ ಪೂಜಾರಿ ಮತ್ತಿತರಿದ್ದರು.