ರಾಯಚೂರು ನಗರವು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ರ‍್ಜೆಗೆ ಏರಿದರು ರ‍್ವಾಕನಿಕರಿಗೆ ಮಾತ್ರ ಶುದ್ದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಜೀವಂತವಾಗಿದೆ. ಕಲುಷಿತ ನೀರನ್ನು ಕುಡಿದು ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮಹಾನಗರ ಪಾಲಿಕೆ ವಿರುದ್ದ ಸರ‍್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೨೨ರ ಜುಲೈ ತಿಂಗಳಳಿನಲ್ಲಿ ಹಿಂದೆ ನಗರಸಭೆಯ ಯಡವಟ್ಟಿನಿಂದ ನಗರದಲ್ಲಿ ಕಲುಷಿತ ನೀರು ಸೇವನೆ ಮಾಡಿ ೭ ಜನ ಸಾವನ್ನಪ್ಪಿದ ಪ್ರಕರಣಗಳು ಇನ್ನೂ ಹಸಿರಾಗಿರುವಾಗಲೇ ನಗರದ ವಿವಿಧ ಬಡಾವಣೆಗಳಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದೆ.
ಎಲ್ಲಿ ಸಮಸ್ಯೆ?
ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೩೫ ವರ‍್ಡ್‌ಗಳ ಪೈಕಿ ಬಹುತೇಕ ವರ‍್ಡ್‌ಗಳಲ್ಲಿ ಈಗ ಪುನಃ ನಗರದ ಮಂಗಳವಾರ ಪೇಟೆ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಲುಷಿತ ನೀರನ್ನು ಪಾಲಿಕೆ ಸರಬರಾಜು ಮಾಡಲಾಗುತ್ತಿದೆ. ಈ ಕುಡಿಯುವ ನೀರಿನಲ್ಲಿ ಹೊಂಡು ನೀರು, ಚರಂಡಿ ನೀರು, ಕಪ್ಪು ಬಣ್ಣದ ಕೆಟ್ಟ ವಾಸನೆಯ ನೀರನ್ನು ಸರ‍್ವಜನಿಕರು ಅನಿವರ‍್ಯವಾಗಿ ಬಳಸುತ್ತಿದ್ದಾರೆ. ನೀರನ್ನು ಕುಡಿದವರು ವಾಂತಿ, ಬೇಧಿ, ರ‍್ಮ ರೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಲುಷಿತ ನೀರು ಯಾಕೆ ಸರಬರಾಜು
ನಗರದಲ್ಲಿ ತುಂಗಭದ್ರಾ ನದಿ ನೀರು ಸಂಗ್ರಹ ಮಾಡಿದ ರಾಂಪುರು ಹಾಗೂ ಕೃಷ್ಣಾ ನದಿಯಿಂದ ಸಂಗ್ರಹ ಮಾಡಿದ ಚಿಕ್ಕಸುಗೂರು ಕೆರೆ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಬಹುತೇತ ಪೈಪ್‌ಗಳು ಅಲ್ಲಲ್ಲಿ ಡ್ಯಾಮೇಜ್ ಆಗಿದ್ದು ಚರಂಡಿ ನೀರು ಸೇರಿಕೊಳ್ಳುತ್ತಿದೆ. ಶುದ್ದೀಕರಣ ಘಟಕದಿಂದ ಸರಬರಾಜಾಗುವ ನೀರು ಮರ‍್ಗ ಮಧ್ಯದಲ್ಲಿ ಕಲುಷಿತವಾಗುತ್ತಿದೆ. ಕಲುಷಿತ ನೀರನ್ನ ನಿತ್ಯ ಕುಡಿಯುತ್ತಿರುವ ನಿವಾಸಿಗಳು ಅನಾರೋಗ್ಯಕ್ಕೀಡಾಗುತ್ತಿದ್ದು ಪಾಲಿಕೆ ಅಧಿಕಾರಿಗಳು, ಸದಸ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯರ ಸಲಹೆಯಂತೆ ನೀರನ್ನು ಕಾಯಿಸಿ ಆರಿಸಿ ಕುಡಿದರು ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ ಬಹಳಷ್ಟು ಜನ ಫಿಲ್ಟರ್ ನೀರಿನ ಮೊರೆ ಹೋಗಿದ್ದಾರೆ. ಪಾಲಿಕೆ ನೀರನ್ನು ಅವಲಂಬಿಸಿರುವವರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಚಿಕ್ಕಮಕ್ಕಳಿಂದ ವಯೋವೃದ್ದರವರೆಗೆ ನೀರಿನ ಸಮಸ್ಯೆಯಿಂದ ಜನ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.
ಲೋಕಯುಕ್ತರಿಂದ ಎಚ್ಚರಿಕೆ
ಆ.೨೮ ರಿಂದ ೩೧ರವರೆ ನಗರಕ್ಕೆ ಆಗಮಿಸಿದ ರಾಜ್ಯ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಚಿಕ್ಕಸುಗೂರಿನ ನೀರಿನ ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ, ಶುದ್ದ ನೀರು ಪೂರೈಕೆ ಮಾಡದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಸಹ ನಗರದ ಹಲವು ಬಡಾವಣೆಗಳಲ್ಲಿ ಕಲುಷಿತ ನೀರು ಸರಬರಾಜಾಗುತ್ತಿರುವುದು ಪಾಲಿಕೆ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಕನಿಷ್ಠ ಈಗಲಾದರು ಸಂಬಂಧಪಟ್ಟವರು ಎಚ್ಚೆತ್ತು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರನ್ನ ಸರಬರಾಜು ಮಾಡಬೇಕಿದೆಂದು ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಹೊಂಡು ಮಿಶ್ರಿತ ನೀರು ಪೂರೈಕೆಗೆ ಸಂಬಂಧಿಸಿದಂತೆ ಈಗಾಗಲೇ ನಗರದ ಎರಡು ಶುದ್ದಿಕರಣ ಘಟಕಗಳನ್ನು ಸ್ವಚ್ಚತೆ ಮಾಡಲಾಗಿದೆ. ನೀರು ಸರಬರಾಜು ಮಾಡುವ ಬಹುತೇತ ಪೈಪ್‌ಗಳ ರಿಪೇರಿ ಮಾಡಲಾಗುತ್ತಿದೆ. ನರಸಮ್ಮ ನರಸಿಂಹಲು ಮಾಡಗಿರಿ ಅಧ್ಯಕ್ಷೆ ಮಹಾನಗರ ಪಾಲಿಕೆ ರಾಯಚೂರು