ಜಿಲ್ಲೆ

ದುಸ್ಥಿತಿಯಲ್ಲಿದೆ ವಿದ್ಯುತ್ ಕಂಬ

ಸುನಿಲ್ ಪೊನ್ನೇಟಿ

ಕುಶಾಲನಗರ

ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿ ಬಳಿ ಸೆಸ್ಕ್ ನಿರ್ಲಕ್ಷ್ಯದಿಂದ ವಿದ್ಯುತ್ ಕಂಬವೊAದು ಅನಾಹುತಕ್ಕೆ ಆಹ್ವಾನ ನೀಡುತ್ತಿದ್ದು, ಕೂಡಲೇ ಈ ಬಗ್ಗೆ ಸಂಬAಧಿಸಿದರವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗುಮ್ಮನಕೊಲ್ಲಿಯ ಮುಖ್ಯರಸ್ತೆಯಿಂದ ಓಂಕಾರೇಶ್ವರ ಬಡಾವಣೆಗೆ ತೆರಳುವ ರಸ್ತೆಯ ಬಳಿ ವಿದ್ಯುತ್ ಕಂಬ ದುಸ್ಥಿತಿಯಲ್ಲಿದೆ. ಸೆಸ್ಕ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ವಿದ್ಯುತ್ ಕಂಬ ಚರಂಡಿಯಲ್ಲಿ ಅಳವಡಿಸಲಾಗಿದ್ದು, ನೀರಿನ ಹರಿವಿನಿಂದ ದುಸ್ಥಿತಿಯಲ್ಲಿದೆ. ಗಾಳಿಗೆ ಅಲುಗಾಡುತ್ತಿರುವ ವಿದ್ಯುತ್ ಕಂಬ ಯಾವ ಸಂದರ್ಭದಲ್ಲಿ ಬೇಕಾದರೂ ಬೀಳುವಂತಿದ್ದು, ಕೂಡಲೇ ಈ ಬಗ್ಗೆ ಸೆಸ್ಕ್ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿದ್ಯುತ್ ಕಂಬದ ಬಳಿ ರಸ್ತೆ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ರಾತ್ರಿ ವೇಳೆ ವಾಹನಗಳು ಚರಂಡಿಗೆ ಬಿದ್ದು ಅನಾಹುತ ಸಂಭವಿಸುತ್ತಿವೆ. ಈ ಬಗ್ಗೆ ಸಂಬAಧಿಸಿದ ಪುರಸಭೆ ಅಧಿಕಾರಿಗಳಿಗಮನಕ್ಕೆ ತರಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.