ನರಗುಂದ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಬಿ.ಆರ್.ಯಾವಗಲ್ ಅವರು ತಹಸೀಲ್ದಾರ್ ಎ.ಡಿ.ಅಮರಾವದಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ‘ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಹತಾಶೆಯ ಮನೋಭಾವನೆಯಿಂದ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿರುವುದು ಖಂಡನೀಯ ಎಂದರು.
ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಅನ್ನು ಕೆಳಮಟ್ಟದಿಂದ ಸಂಘಟನೆ ಮಾಡುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್, ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಣ್ಣ ಕೊಳ್ಳೇರಿ, ದ್ಯಾಮಣ್ಣ ಸವದತ್ತಿ, ಎಫ್.ವೈ. ದೊಡಮನಿ, ಪ್ರಕಾಶ ಹಡಗಲಿ, ರಾಜು ಕಲಾಲ, ವಿಷ್ಣು ಸಾಠೆ, ಎಸ್.ಕೆ. ದಂಡಾಪೂರ, ಗುರುಪಾದಪ್ಪ ಕುರಹಟ್ಟಿ, ಎಂ.ಬಿ. ಅರಹುಣಸಿ, ವಿಠ್ಠಲ ಶಿಂಧೆ, ಶಿವನಗೌಡ ಹೆಬ್ಬಳ್ಳಿ, ಕೃಷ್ಣಾ ಗೊಂಬಿ, ಮಲ್ಲಪ್ಪ ಅಬ್ಬಿಗೇರಿ, ಕಿರಣ ಜೋಗಣ್ಣವರ, ಕೆ.ಬಿ. ಖಲೀಫ್, ಬಸವರಾಜ, ಉಮಾ ದ್ಯಾವನೂರ ಇತರರಿದ್ದರು.