ಮಹಾಲಿಂಗಪುರ ಸಮೀಪದ ಗೋದಾವರಿ ಬಯೋರಿಫೈನರೀಸ್‌ನ ಮಜದೂರ ಯುನಿಯನ್ ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಿದ ಹಾಗೂ ನಿವೃತ್ತಿ ಹೊಂದುತ್ತಿರುವ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಿ. ನಾಗರಾಜ, ಬಿ.ವಿ. ಮೆಲಪ್ಪಗೋಳ, ರಾಮನಗೌಡ ಪಾಟೀಲ ಇದ್ದರು. 
ಜಿಲ್ಲೆ

ರಾಜಕಾರಣಿಗಳಿಂದ ಕಾರ್ಖಾನೆ ಅಸ್ತಿತ್ವಕ್ಕೆ ಧಕ್ಕೆ

ಮಹಾಲಿಂಗಪುರ: ಗೋದಾವರಿ ಬಯೋ ರಿಫೈನರೀಸ್ ಕಾರ್ಖಾನೆ ಹಾಗೂ ಮೂರ‌್ನಾಲ್ಕು ಕಾರ್ಖಾನೆಗಳು ಕಾರ್ಮಿಕರು ಮತ್ತು ರೈತರ ಕಾಳಜಿ ವಹಿಸಿ ಮಾದರಿಯಾಗಿವೆ ಎಂದು ರಾಜ್ಯ ಸಕ್ಕರೆ ಕಾರ್ಮಿಕರ ಮಹಾಮಂಡಳ ಬೆಂಗಳೂರಿನ ಅಧ್ಯಕ್ಷ ಬಿ. ನಾಗರಾಜ ಹೇಳಿದರು.

ಸಮೀರವಾಡಿ ಮಜದೂರ ಯುನಿಯನ್ ಕಚೇರಿ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿ ಭಾಗದಲ್ಲಿ ಅನೇಕ ಸಹಕಾರಿ ಕಾರ್ಖಾನೆಗಳು ಹಾಳಾಗಿವೆ. ಆದರೆ ಅದರ ಅಧ್ಯಕ್ಷರಾಗಿದ್ದವರು ಮಾತ್ರ ಸ್ವತಃ ಎರಡ್ಮೂರು ಹೊಸ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಅವರು ಮಾತ್ರ ಚೆನ್ನಾಗಿದ್ದಾರೆ. ರಾಜಕಾರಣಿಗಳು ಯಾವಾಗ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿ ಉದ್ಯಮಕ್ಕೆ ಕಾಲಿಟ್ಟರೊ ಆವಾಗ ಸಕ್ಕರೆ ಕಾರ್ಖಾನೆಗಳ ಅಸ್ತಿತ್ವ ನಾಶವಾಗುವುದಕ್ಕೆ ಆರಂಭಿಸಿತು ಎಂದರು.

ಕಾರ್ಮಿಕರು ಎನಿಕೊಳ್ಳಬೇಕಾದರೆ ವೇಜ್ ಬೋರ್ಡ್‌ನಿಂದ ಕವರೇಜ್ ಇರಬೇಕು. ಆದರೆ ಅಲ್ಲಿಯ ಕಾರ್ಮಿಕರಿಗೆ ವೇಜ್ ಬೋರ್ಡ್ ವಿಚಾರನೇ ಗೊತ್ತಿಲ್ಲ. ರಾಜ್ಯದಲ್ಲಿ ತಮಗೋಸ್ಕರ ಹೋರಾಟ ಮಾಡುವ ಕಮಿಟಿ ಇದೆ. ಅನೇಕ ಕಾರ್ಖಾನೆಗಳ ಕಾರ್ಮಿಕರು ಅದರ ಲ ಪಡೆಯುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ವೇಜ್ ಬೋರ್ಡ್ ಕವರೇಜ್ ಇಲ್ಲದವರಿಗೆ ಜಾಬ್ ಸೆಕ್ಯುರಿಟಿ ಇರುವುದಿಲ್ಲ ಎಂದರು.

ರಾಜಕಾರಣಿಗಳು ಪ್ರಾರಂಭಿಸಿದ ಕಾರ್ಖಾನೆಗಳಲ್ಲಿ ಅವರಿಗೆ ಇಷ್ಟ ಬಂದ ಹಾಗೆ ಸಂಬಳ ನೀಡುತ್ತಿದ್ದಾರೆ. ಇಂತಹ ಕಾರ್ಖಾನೆಗಳಲ್ಲಿ ಕಾರ್ಮಿಕರು ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಅವರ ಶೋಷಣೆ ಮಾಡಲಾಗುತ್ತಿದೆ. ದೇವರಾಜ ಅರಸು ಅವರು ಜೀತ ಪದ್ಧತಿ ತೆಗೆದು ಹಾಕಿದ್ದರೂ ಅದು ಇನ್ನೂ ಸಂಪೂರ್ಣ ಕಡಿಮೆ ಆಗಿಲ್ಲ. ರಾಜ್ಯದ ಹಲವು ಕಾರ್ಖಾನೆಗಳಲ್ಲಿ ಕಾರ್ಮಿಕರ ಶೋಷಣೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮತ್ತು ಕಾರ್ಖಾನೆಯ ಎಜಿಎಂ ಎಂ. ರಾಮಚಂದ್ರ ಮಾತನಾಡಿ, ಗೋದಾವರಿ ಕಾರ್ಖಾನೆಯಲ್ಲಿ ವೇಜ್ ಬೋರ್ಡ್ ಅಳವಡಿಸಲಾಗಿದ್ದು, ಇಎಸ್‌ಐ ಸೌಲಭ್ಯ ಇದೆ. ಈ ಕಾರ್ಖಾನೆ 7ನೇ ವೇತನ ಆಯೋಗದ ಶೀಾರಸನ್ನು ಸಂಪೂರ್ಣ ಜಾರಿ ಮಾಡಿದ ಪ್ರಥಮ ಕಾರ್ಖಾನೆಯಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದರು.

ಸಮೀರವಾಡಿ ಮಜದೂರ ಯುನಿಯನ್ ಕಾರ್ಯಾಧ್ಯಕ್ಷ ಬಿ.ವಿ. ಮೇಲಪ್ಪಗೋಳ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಡಿಸ್ಟಿಲರಿ ವಿಭಾಗದ ಎಂಪ್ಲಾಯಿಜ್ ಯುನಿಯನ್ ಅಧ್ಯಕ್ಷ ಬಸವರಾಜ ಭದ್ರಶೆಟ್ಟಿ ಮಾತನಾಡಿದರು.

ವಿವಧ ಕಾರ್ಖಾನೆಗಳ ಗಣ್ಯರಾದ ಬಿ.ಎಲ್. ಕೃಷ್ಣೇಗೌಡ, ಅಸ್ಲಂ ಪೆಂಡಾರಿ, ಈರನಗೌಡ ಪಾಟೀಲ, ಬಸವರಾಜ ಒಂಟಗೋಡಿ ವೇದಿಕೆ ಮೇಲಿದ್ದರು. ಎಸ್.ಬಿ. ಬಿರಾದಾರ ಪಾಟೀಲ ನಿರೂಪಿಸಿದರು. ಮಜದೂರ ಯುನಿಯನ್ ಪದಾಧಿಕಾರಿಗಳಾದ ಕೆ.ಬಿ. ವಾಜಂತ್ರಿ, ಎನ್.ಪಿ. ಮಾಳಿ, ಎಸ್.ಬಿ. ಪಾಟೀಲ, ವಿ.ಎಸ್. ಕಮತೆ, ಸಿ.ಎಂ. ಅಥಣಿ ಇದ್ದರು.