ಮೈಸೂರು: ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸುವುದೇ ಬಹುತೇಕ ರಾಜಕಾರಣಿಗಳ ಗುರಿಯಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹರಿಹಾಯ್ದರು.
ಶಿರಸಿಯ ಸುಖಿತ್ವಂ ಕೇರ್ ಪ್ರೈ.ಲಿ.ನ ‘ಕಾಂಫಿ ಕಪ್’ 4ನೇ ವಾರ್ಷಿಕೋತ್ಸವ, ಮೈಸೂರು ಶಾಖೆಯ ಶುಭಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು
ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುವುದರೊಂದಿಗೆ ರಿಯಲ್ ಎಸ್ಟೇಟ್ ಮಾಡುವುದೇ ಅನೇಕ ರಾಜಕಾರಣಿಗಳ ಕಾಯಕವಾಗಿದೆ. ಪಾಪದವರ ಜಮೀನು ಕಬಳಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅವರ ಕಸುಬು ಆಗಿದೆ ಎಂದು ಕಿಡಿಕಾರಿದರು.
ವೈದ್ಯರಾಗಲು ಎಂಬಿಬಿಎಸ್ ಓದಬೇಕು. ಆದರೆ, ರಾಜಕಾರಣಿಗಳಿಗೆ ಯಾವುದೇ ವಿದ್ಯಾರ್ಹತೆಯೇ ಇಲ್ಲವಾಗಿದೆ. ಅವರಿಗೆ ಅಧಿಕಾರದ ನಶೆ ಇರುತ್ತದೆಯೇ ಹೊರತು, ಜನರಿಗೆ ಒಳ್ಳೆಯದು ಮಾಡುವುದು ಇರಲ್ಲ ಎಂದೂ ಟೀಕಿಸಿದರು.
ನಾನು ರಿಯಲ್ ಎಸ್ಟೇಟ್ ದಂಧೆ ಮಾಡಿ ಹಣ ಮಾಡಿಕೊಳ್ಳಲಿಲ್ಲ. ಜನರಿಗಾಗಿ ಕೆಲಸ ಮಾಡಿರುವೆ ಎಂದರು.