ಮೈಸೂರು: ರಾಜಕೀಯ ಅಧಿಕಾರವನ್ನು ಸಮಾಜದ ಬದಲಾವಣೆಗೆ ಬಳಸಬೇಕೇ ಹೊರತು ಮೋಜಿಗೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾ ವಕೀಲರ ಸಂಘ ನಗರದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸವಾರಂಭ ಹಾಗೂ ಹಿರಿಯ ವಕೀಲ ಎಚ್. ಗಂಗಾಧರನ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರಸ್ತುತ ರಾಜಕೀಯ ಸ್ವಾತಂತ್ರೃ ದೊರೆತ್ತಿದೆ. ಇದರ ಜತೆಗೆ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರೃ ಸಿಕ್ಕಾಗ ಮಾತ್ರ ಸ್ವಾತಂತ್ರೃಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ನನ್ನನ್ನು ವೈದ್ಯನಾಗಿ ಮಾಡಬೇಕು ಎಂಬುದು ನಮ್ಮ ಅಪ್ಪನ ಕನಸಾಗಿತ್ತು. ಆದರೆ, ವೈದ್ಯಕೀಯ ಸೀಟ್ ದೊರೆಯಲಿಲ್ಲ. ನಂತರ ಕಾನೂನು ಪದವಿ ಪಡೆದೆ. ವಕೀಲ ವೃತ್ತಿಯನ್ನು ಮುಂದುವರೆಸಿದ್ದರೆ ಉತ್ತಮ ವಕೀಲನಾಗುತ್ತಿದ್ದೆ. ಇದೀಗ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ನನ್ನ ಗೆಲುವಿನಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಮೈಸೂರು ಭಾಗದ ಬಹುತೇಕ ವಕೀಲರು ನನ್ನ ಪರವಾಗಿ ಕೆಲಸ ವಾಡಿದ್ದಾರೆ. ಗೆಲುವಿಗೆ ಞಿುಸೂರು ವಕೀಲರ ಸಂಘದ ಕೊಡುಗೆಯೂ ಇದೆ ಎಂದು ಹೇಳಿದರು.
ವಕೀಲ ವೃತ್ತಿಯಲ್ಲಿದ್ದ ಸಂದರ್ಭ ಸಂಜೆ ಕಾರ್ಡ್ಸ್ ಆಡುತ್ತಿದ್ದೆವು. ಆ ಸಂದರ್ಭ ನಾನು ಸಂಘದ ಕಾರ್ಯದರ್ಶಿ ಆಗಿದ್ದೆ. ವಕೀಲರ ಸಂಘದಲ್ಲಿ ಕಾರ್ಡ್ಸ್ ಆಡಬಾರದು ಎಂದು ವಕೀಲ ಶಿವನಂಜೇಗೌಡ ಅಮರಾಣಾಂತ ಉಪವಾಸ ಶುರು ಮಾಡಿದ್ದರು. ಆ ಸಂದರ್ಭ ನನ್ನನ್ನು ನ್ಯಾಯಾಧೀಶರು ಕರೆದು ವಿಚಾರಿಸಿದ್ದರು. ಆಗ ಏನು ಮಾಡೋದು ಅಂತ ಚಿಂತಿಸಿ. ಈ ವಿಚಾರವಾಗಿ ವೆಂಕಟಸುಬ್ಬಯ್ಯ ಎಂಬ ವಕೀಲರೊಂದಿಗೆ ಸಮಾಲೋಚನೆ ನಡೆಸಿದರು. ಅವರು ಧರಣಿ ನಡೆಸುತ್ತಿದ್ದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ಶಿವನಂಜೇಗೌಡ ಟೆಂಟ್ ಬಿಚ್ಚಿಕೊಂಡು ಹೋಗುವಂತಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಾ ಗೈಡ್ ಕಾನೂನು ಮಾಸ ಪತ್ರಿಕೆ ಸಂಪಾದಕ ಎಚ್.ಎನ್. ವೆಂಕಟೇಶ್ ಬೆಳ್ಳಿ ಗದೆಯನ್ನು ನೀಡಿ ಸನ್ಮಾನಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್. ಸಂಗ್ರೇಶಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್. ಉಮೇಶ್, ಹಿರಿಯ ವಕೀಲರಾದ ಸಿ.ಎಂ.ಜಗದೀಶ್, ಅಪ್ಪಾಜಿಗೌಡ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಬಿ.ಆರ್. ಚಂದ್ರಮೌಳಿ, ಕೆಪಿಸಿಸಿ ಉಪಾಧ್ಯಕ್ಷ ಚಂದ್ರಮೌಳಿ, ಮುಡಾ ವಾಜಿ ಅಧ್ಯಕ್ಷ ಸಿ.ಬಸವೇಗೌಡ ಹಾಗೂ ಇತರರು ಇದ್ದರು.