ಬೆಂಗಳೂರು:ಅಂಟಿಬಯೋಟಿಕ್ ಬಳಕೆ ಮತ್ತು ನಿಯಂತ್ರಣಕ್ಕೆ ಹೊಸ ನೀತಿ ಅಗತ್ಯವಿದೆ ಎಂದು ಸಂಸದ ಡಾ.ಸಿ .ಎನ್.ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ 7ನೇ ರಾಷ್ಟ್ರೀಯ ಮಟ್ಟದ ಫೀವರ್ಕಾನ್-2024 ಸಮಾವೇಶದಲ್ಲಿ ಮಾತನಾಡಿದರು. ವೈದ್ಯಕೀಯ ಶಾಸ್ತ್ರದ ರೋಗ ರ್ನಿಣಯದಲ್ಲಿ ಜ್ವರ ನಿರ್ವಹಣೆ ಬಹಳ ಪ್ರಮುಖ ಅಂಶ. ಇತ್ತೀಚಿನ ದಿನಗಳಲ್ಲಿ ರೋಗಿಗಳ ಕಾಯಿಲೆಯನ್ನು ವೇಗವಾಗಿ ನಿವಾರಿಸುವ ಭರಾಟೆಯಲ್ಲಿ ಅಗತ್ಯಗಿಂತ ಹೆಚ್ಚಾಗಿ ಆಂಟಿಬಯೋಟಿಕ್ ಬಳಕೆ ಮಾಡಲಾಗುತ್ತಿದೆ.ತರಕಾರಿಗಳು, ಹಣ್ಣುಗಳ ಕೃಷಿಯಲ್ಲೂ ವ್ಯಾಪಕವಾಗಿ ಆಂಟಿಬಯೋಟಿಕ್ ಬಳಸಲಾಗುತ್ತಿದೆ.ಇದು ಅಮೃತವೂ ಹೌದು. ಆದರೆ,"ಅತಿಯಾದ ಅಮೃತ ವಿಷ ಎನ್ನುವಂತೆ' ಅತಿಯಾಗಿ ಅಂಟಿಬಯೋಟಿಕ್ ಬಳಸಬಾರದು ಎಂದರು.
ಬಹಳಷ್ಟು ಅರೋಗ್ಯ ಸಮಸ್ಯೆಗಳ ಪ್ರಥಮ ಲಕ್ಷಣ ಜ್ವರ. ಇದನ್ನ ಸೂಕ್ತವಾಗಿ ಪರಿಶೀಲನೆ ಮಾಡುವುದು ಅಗತ್ಯ. ತಂತ್ರಾನ ಮುಂದುವರೆದಂತೆ ವೈದ್ಯರು, ರೋಗಿಗಳ ಮಾಹಿತಿ ಪರಿಶೀಲಿಸಿ ಚಿಕಿತ್ಸೆ ಪ್ರಾರಂಭಿಸುತ್ತಾರೆ. ರೋಗಿಯನ್ನು ಮುಟ್ಟಿ ಆರೋಗ್ಯ ಪರಿಶೀಲಿಸಿದರೆ ಬಹಳಷ್ಟು ವಿಷಯ ತಿಳಿಯಬಹುದು. ಆದರೆ, ಇದೀಗ ಚಿಕಿತ್ಸಾ ವಿಧಾನವೇ ಬದಲಾಗುತ್ತಿದೆ ಎಂದು ಸಂಸದರು ತಿಳಿಸಿದರು. ಅಸೋಷಿಯೇಷನ್ ಆಫ್ ಇಂಡಿಯನ್ ಫಿಸಿಷಿಯನ್ಸ್ ಅಧ್ಯರಾದ ಪೊ. ಡಾ.ಜಿ. ನರಸಿಮ್ಲೂ, ಡಾ.ಎ.ಮುರುಗನಾಥನ್, ಫೀವರ್ಕಾನ್ ಸಂಚಾಲಕಿ ಡಾ.ಮಂಜುಳಾ ಸೇರಿ ವಿವಿಧ ಭಾಗಗಳಿಂದ ಸಾವಿರಕ್ಕೂ ಅಧಿಕ ವೈದ್ಯರು ಉಪಸ್ಥಿತರಿದ್ದರು.