ಶಿಗ್ಗಾಂವಿ: ಮತದಾನದ ದಿನದಂದು ಪಕ್ಷದ ಚಿಹ್ನೆ ಹಾಗೂ ಅಭ್ಯಥಿರ್ಯ ಹೆಸರು ಇರುವ ಬ್ಯಾನರ್ಅನ್ನು ಟೇಬಲ್ ಮೇಲೆ ಹಾಕಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಇಬ್ಬರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮನುಮರಹಳ್ಳಿಯ ಅನ್ನಪೂರ್ಣ ದೇವೇಂದ್ರಪ್ಪ ಕಮ್ಮಾರ (32) ಹಾಗೂ ಇವರ ಜತೆ ಇದ್ದ ಮತ್ತೊಬ್ಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ಕೆಆರ್ಎಸ್ ಪಕ್ಷದ ಹೆಸರು, ಚಿಹ್ನೆ, ಅಭ್ಯಥಿರ್ಯ ಭಾವಚಿತ್ರದ ಬ್ಯಾನರ್ಅನ್ನು ಜನರಿಗೆ ಕಾಣುವಂತೆ ಟೇಬಲ್ ಮೇಲೆ ಹಾಕಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.